ಮಡಿಕೇರಿ, ಮೇ ೫: ಕೋವಿಡ್ ಶಿಷ್ಟಾಚಾರ ಪಾಲನೆಯೊಂದಿಗೆ ವಾರದ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಬೆಳಿಗ್ಗೆ ೬ ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ಹಣ್ಣು - ತರಕಾರಿಗಳನ್ನು ಜಿಲ್ಲೆಯಲ್ಲಿ ಮಾರಾಟ ಮಾಡಲು ಸ್ಥಳಗಳನ್ನು ನಿಗದಿಗೊಳಿಸಲಾಗಿದ್ದು, ವಿವರ ಇಂತಿದೆ.

ಮಡಿಕೇರಿಗೆ ಸಂಬAಧಿಸಿದAತೆ ಜಾಗದ ಲಭ್ಯತೆಗೆ ಅನುಗುಣವಾಗಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ೪೦, ಎಪಿಎಂಸಿ ಆವರಣದಲ್ಲಿ ೨೦ ಮಳಿಗೆಗಳನ್ನು ತೆರೆಯಬಹುದಾಗಿದೆ. ಕುಶಾಲನಗರ ಆರ್‌ಎಂಸಿ ಆವರಣದಲ್ಲಿ ಗರಿಷ್ಠ ೨೫ ಮಳಿಗೆಗಳನ್ನು, ಸೋಮವಾರಪೇಟೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗರಿಷ್ಠ ೨೦ ಮಳಿಗೆಗಳನ್ನು, ವೀರಾಜಪೇಟೆ ಸರಕಾರಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣದಲ್ಲಿ ಗರಿಷ್ಠ ೨೦ ಮಳಿಗೆಗಳನ್ನು ತೆರೆಯಬಹುದಾಗಿದೆ. ಪೊನ್ನಂಪೇಟೆ ಸರಕಾರಿ ಪ್ರಾಥಮಿಕ ಶಾಲೆ ಆವರಣ, ಸಿದ್ದಾಪುರ ಮಾರುಕಟ್ಟೆ ಪ್ರಾಂಗಣ, ಪಾಲಿಬೆಟ್ಟ ಖಾಸಗಿ ಬಸ್ ನಿಲ್ದಾಣ, ಶ್ರೀಮಂಗಲ ವಾಜಪೇಯಿ ಮೈದಾನ, ಹುದಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ, ಗೋಣಿಕೊಪ್ಪ ಕಾರು ನಿಲ್ದಾಣ, ಭಾಗಮಂಡಲ ರಸ್ತೆ ಬದಿ ಮತ್ತು ಮಾರುಕಟ್ಟೆ ಆವರಣ, ಬೇಂಗೂರು ಸರಕಾರಿ ಶಾಲಾ ಮೈದಾನ, ನಾಪೋಕ್ಲು ಸರಕಾರಿ ಶಾಲಾ ಮೈದಾನ, ಮೂರ್ನಾಡು ರಸ್ತೆ ಬದಿ, ದೊಡ್ಡಕೊಡ್ಲಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ, ಮಾದಾಪುರ ಜಿಎಂಪಿ ಶಾಲಾ ಮೈದಾನ, ಗುಡುಗಳಲೆ ಜಾತ್ರಾ ಮೈದಾನ, ಹೆಬ್ಬಾಲೆ ಪ್ರಾಥಮಿಕ ಶಾಲಾ ಮೈದಾನ, ಸುಂಟಿಕೊಪ್ಪ ಸರಕಾರಿ ಪ್ರೌಢಶಾಲಾ ಮೈದಾನ, ಕೂಡುಮಂಗಳೂರು ಡಯಟ್ ಮೈದಾನ ಈ ಸ್ಥಳಗಳಲ್ಲಿ ಜಾಗದ ಲಭ್ಯತೆಗೆ ಅನುಗುಣವಾಗಿ ಹಣ್ಣು - ತರಕಾರಿ ಮಾರಾಟಕ್ಕೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾರುಲತಾ ಸೋಮಲ್ ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಾತ್ರವಲ್ಲದೆ ಜಿಲ್ಲೆಯ ಆಯಾ ತಾಲೂಕುಗಳಲ್ಲಿ ವರದಿ ಆಗುವ ಸೋಂಕಿತರನ್ನು ಸದರಿ ತಾಲೂಕುಗಳಲ್ಲೇ ತೆರೆಯಲಾಗಿರುವ ಕೋವಿಡ್ ಸೆಂಟರ್‌ಗಳಿಗೆ ಆಗಮಿಸಲು ಸೂಚಿಸಬೇಕು. ಕೋವಿಡ್ ಕೇರ್ ಸೆಂಟರ್‌ಗಳಿಗೆ ಆಗಮಿಸಿದ ಸೋಂಕಿತರನ್ನು ಅಲ್ಲಿಯೇ ಪರೀಕ್ಷಿಸಿ ಅವರುಗಳು ನಿಗದಿತ ಕೋವಿಡ್ ಆಸ್ಪತ್ರೆ, ನಿಗದಿತ ಕೋವಿಡ್ ಆರೈಕೆ ಕೇಂದ್ರ, ಕೋವಿಡ್ ಕೇರ್ ಸೆಂಟರ್ ಮತ್ತು ಹೋಂ ಐಸೋಲೇಷನ್‌ನಲ್ಲಿ ಇರಬೇಕೆಂಬ ಬಗ್ಗೆ ಖಚಿತಪಡಿಸಿಕೊಂಡು, ಅವರುಗಳನ್ನು ಆ್ಯಂಬುಲೆನ್ಸ್ ಮೂಲಕ ಕಳುಹಿಸಿಕೊಡಲು ಕ್ರಮವಹಿಸುವಂತೆಯೂ ಜಿಲ್ಲಾಧಿಕಾರಿ ಸಂಬAಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ.