ಸೋಮವಾರಪೇಟೆ, ಮೇ. ೫: ಸೋಮವಾರಪೇಟೆ ಪಟ್ಟಣಕ್ಕೆ ಒಳಪಡುವ ಕರ್ಕಳ್ಳಿ ಗ್ರಾಮದ ಸ್ಮಶಾನ ಜಾಗವು ಒಂದಿಲ್ಲೊAದು ಜಾತಿಗೆ ಮೀಸಲಾಗಿದ್ದು, ಸಾರ್ವಜನಿಕ ಸ್ಮಶಾನಕ್ಕೆ ಜಾಗದ ಕೊರತೆ ಎದುರಾಗಿತ್ತು. ಈಗಾಗಲೇ ಪ್ರಬಲ ಸಮುದಾಯಗಳು ತಮ್ಮ ಜಾತಿಯ ಹೆಸರಿಗೆ ಸ್ಮಶಾನದ ದಾಖಲೆಗಳನ್ನು ಪಡೆದುಕೊಂಡಿದ್ದು, ಉಳಿದಿದ್ದ ೧.೭೫ ಎಕರೆ ಜಾಗವನ್ನು ಇದೀಗ ಸಾರ್ವಜನಿಕ ಸ್ಮಶಾನಕ್ಕೆ ಮೀಸಲಿರಿಸಲಾಗಿದೆ.
ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಯಾವುದೇ ದಾಖಲೆಗಳಿಲ್ಲದ ಹಿನ್ನೆಲೆ ಹಲವಷ್ಟು ಬಾರಿ ಮೃತದೇಹಗಳ ಅಂತ್ಯಸAಸ್ಕಾರಕ್ಕೆ ಸಮಸ್ಯೆಯಾಗಿತ್ತು. ಇದೀಗ ಜಿಲ್ಲಾಡಳಿತದ ಸೂಚನೆಯಂತೆ ತಾಲೂಕು ಆಡಳಿತದಿಂದ ಸ್ಮಶಾನ ಜಾಗ ಗುರುತಿಸಿ ದಾಖಲಾತಿ ಸಿದ್ದ ಪಡಿಸಲಾಗಿದ್ದು, ಬಹುವರ್ಷಗಳ ಕಾಲ ಎದುರಾಗಿದ್ದ ಸಮಸ್ಯೆ ಬಗೆ ಹರಿದಂತಾಗಿದೆ.
ಕೊರೊನಾ ಮಹಾಮಾರಿಯಿಂದ ದೇಶಾದ್ಯಂತ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದು, ಕೆಲವೊಮ್ಮೆ ಸ್ಮಶಾನದ ಸಮಸ್ಯೆಯಿಂದ ಮೃತಪಟ್ಟವರ ಅಂತ್ಯಸAಸ್ಕಾರವೂ ಸಮರ್ಪಕ ವಾಗುತ್ತಿಲ್ಲ. ಮೈದಾನಗಳನ್ನೇ ಸ್ಮಶಾನ ಮಾಡಿ ಅಂತ್ಯಸAಸ್ಕಾರ ನಡೆಸಿದ ದೃಷ್ಟಾಂತಗಳು ನಡೆದಿದ್ದು, ಇದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿ ವರ್ಗ ಕರ್ಕಳ್ಳಿ ಬಾಣೆಯಲ್ಲಿ ೧.೭೫ ಎಕರೆ ಜಾಗವನ್ನು ಗುರುತಿಸಿ ಸ್ಮಶಾನಕ್ಕೆ ಮೀಸಲಿರಿಸಿದೆ.
ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಅವರು ಹೆಚ್ಚಿನ ಮುತುವರ್ಜಿ ವಹಿಸಿ ಜಾಗವನ್ನು ಮೀಸಲಿರಿಸಿದ್ದು, ಈ ಸಂಬAಧಿತ ದಾಖಲೆಗಳನ್ನು ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ಹಸ್ತಾಂತರಿಸಿ, ಪಂಚಾಯಿತಿಗೆ ಉಸ್ತುವಾರಿ ವಹಿಸಿದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ, ಕಂದಾಯ ಇಲಾಖೆ, ಸರ್ವೆ ಇಲಾಖೆ, ಪ.ಪಂ. ಅಧಿಕಾರಿಗಳು ಉಪಸ್ಥಿತರಿದ್ದರು.