ಕುಶಾಲನಗರ, ಮೇ ೫: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ದೈಹಿಕ ಮತ್ತು ಮಾನಸಿಕವಾಗಿ ದುರ್ಬಲವಾಗಿರುವ ೩೦ ಜನ ಸದಸ್ಯರಿಗೆ ತಲಾ ರೂ. ೭೫೦ ಮಾಸಾಶನ ವಿತರಿಸಲಾಯಿತು.

ಸೋಮವಾರಪೇಟೆ ತಾಲೂಕಿನ ಯೋಜನಾ ಕಾರ್ಯಕರ್ತರು ಸಮೀಪದ ನಂಜರಾಯಪಟ್ಟಣ ಮತ್ತಿತರ ಪ್ರದೇಶಗಳ ಮನೆ-ಮನೆಗೆ ಭೇಟಿ ನೀಡಿ ಫಲಾನುಭವಿಗಳಿಗೆ ವಿತರಿಸಿದರು.

ಈ ಸಂದರ್ಭ ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಜಯಂತಿ, ಕುಶಾಲನಗರ ವಲಯ ಮೇಲ್ವಿಚಾರಕಿ ಜಯಶ್ರೀ ಹರೀಶ್, ಕುಶಾಲನಗರ ವಲಯ ಸೇವಾ ಪ್ರತಿನಿಧಿಗಳಾದ ಪಾರ್ವತಿ, ಸೌಮ್ಯ, ಲಿಲ್ಲಿ, ರೋಹಿಣಿ ಇದ್ದರು.