ಮಡಿಕೇರಿ,ಮೇ ೫: ಕಳೆದ ತಾ.೩ರಂದು ನಿಧನರಾದ ನಿವೃತ್ತ ನ್ಯಾಯಮೂರ್ತಿ ಎಂ.ಪಿ.ಚಿಣ್ಣಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಮಡಿಕೇರಿ ವಕೀಲರ ಸಂಘದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘದ ವತಿಯಿಂದ ಆನ್ಲೈನ್ ಮೂಲಕ ನಡೆದ ಸಂಘದ ಪದಾಧಿಕಾರಿಗಳ ವಾಸ್ತವ ಸಭೆಯಲ್ಲಿ ಸಂತಾಪ ಸೂಚಿಸಿ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ಚಿಣ್ಣಪ್ಪ ಅವರು ಮಡಿಕೇರಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿ, ಸಂಘದ ಸದಸ್ಯರಾಗಿ ನಂತರದಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾದ ಬಗ್ಗೆ ಇದೇ ಸಂದರ್ಭದಲ್ಲಿ ಸ್ಮರಿಸಿ ಕೊಳ್ಳಲಾಯಿತು. ಸಂಘದ ಅಧ್ಯಕ್ಷ ಕೆ.ಡಿ.ದಯಾನಂದ, ಕಾರ್ಯದರ್ಶಿ ಎಂ.ಕೆ.ಅರುಣ್ಕುಮಾರ್, ಪದಾಧಿಕಾರಿಗಳಿದ್ದರು.