ಸೋಮವಾರಪೇಟೆ, ಮೇ ೫: ಕೊರೊನಾ ಸೋಂಕು ಶಂಕಿತ ಯುವಕನೋರ್ವ ಆಂಬ್ಯುಲೆನ್ಸ್ಗೆ ಕಾಯುತ್ತಿದ್ದ ಸಂದರ್ಭ ನಡುರಸ್ತೆಯಲ್ಲೇ ಕುಸಿದು ಬಿದ್ದು, ಸಾವನ್ನಪ್ಪಿದ ಘಟನೆ ಸಮೀಪದ ಬೇಳೂರು ಗ್ರಾ.ಪಂ. ವ್ಯಾಪ್ತಿಯ ಬಜೆಗುಂಡಿಯಲ್ಲಿ ಸಂಭವಿಸಿದೆ.
ಬಜೆಗುAಡಿಯ ನಿವಾಸಿ ಗೌರಿ ಎಂಬವರ ಪುತ್ರ, ಪಟ್ಟಣದ ಬಾರ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮನೋಜ್ (ಮನು-೨೩) ಎಂಬಾತನಿಗೆ ಕೊರೊನಾ ರೋಗ ಲಕ್ಷಣ ಕಂಡುಬAದಿತ್ತು. ನಿನ್ನೆ ದಿನ ಸೋಮವಾರಪೇಟೆ ಯಲ್ಲಿ ಗಂಟಲು ದ್ರವದ ಮಾದರಿ ನೀಡಿ ವರದಿಯ ನಿರೀಕ್ಷೆಯಲ್ಲಿ ಮನೆಗೆ ವಾಪಸ್ ಆಗಿದ್ದ.
ಇಂದು ಬೆಳಗ್ಗಿನಿಂದಲೇ ಜ್ವರ, ಶೀತ, ಕೆಮ್ಮು ಹೆಚ್ಚಾಗಿ ಉಸಿರಾಟದ ಸಮಸ್ಯೆಯೂ ಕಂಡುಬAದಿತ್ತು. ಈ ಬಗ್ಗೆ ಆಂಬ್ಯುಲೆನ್ಸ್ಗೆ ಮೊಬೈಲ್ ಮೂಲಕ ಮಾಹಿತಿ ನೀಡಿದ ಯುವಕ ಮಧ್ಯಾಹ್ನದ ವೇಳೆಗೆ
(ಮೊದಲ ಪುಟದಿಂದ) ಆಂಬ್ಯುಲೆನ್ಸ್ಗಾಗಿ ಬಜೆಗುಂಡಿಯ ಮುಖ್ಯರಸ್ತೆಯ ಬಳಿ ಕಾಯುತ್ತಿದ್ದ.
ಸುಮಾರು ೨ ಗಂಟೆಯ ವೇಳೆಗೆ ಬಜೆಗುಂಡಿಗೆ ಆಂಬ್ಯುಲೆನ್ಸ್ ಬಂದಿದ್ದು, ಇದಕ್ಕೆ ಹತ್ತಲೆಂದು ತೆರಳಿದ ಸಂದರ್ಭ ರಸ್ತೆಯ ಮಧ್ಯೆಯೇ ಕುಸಿದು ಬಿದ್ದಿದ್ದಾನೆ. ತಕ್ಷಣ ಆಶಾ ಕಾರ್ಯಕರ್ತೆ, ಆಂಬ್ಯುಲೆನ್ಸ್ ಸಿಬ್ಬಂದಿಗಳು ಮನೋಜ್ನನ್ನು ವಾಹನಕ್ಕೆ ಸಾಗಿಸಿದ್ದು, ಮಡಿಕೇರಿಯ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾನೆ.
ಕಳೆದ ಕೆಲ ಸಮಯದಿಂದ ಕಾಮಾಲೆ ಹಾಗೂ ಮೂರ್ಚೆ ರೋಗದಿಂದ ಬಳಲುತ್ತಿದ್ದ ಮನೋಜ್ಗೆ ಮೊನ್ನೆಯಿಂದ ಕೊರೊನಾ ರೋಗ ಲಕ್ಷಣಗಳು ಕಂಡುಬAದಿತ್ತು. ಈ ಹಿನ್ನೆಲೆ ಮಡಿಕೇರಿಯ ಕೋವಿಡ್ ಕೇರ್ ಸೆಂಟರ್ಗೆ ತೆರಳಲು ಬ್ಯಾಗ್ನಲ್ಲಿ ಬಟ್ಟೆಗಳನ್ನು ತುಂಬಿಸಿಕೊAಡು ಸಿದ್ದನಾಗಿದ್ದ. ಅಷ್ಟರಲ್ಲಾಗಲೇ ದುರಂತ ಸಂಭವಿಸಿದೆ.