ಮಡಿಕೇರಿ, ಮೇ ೫: ಜಿಲ್ಲೆಗೆ ಬುಧವಾರದಂದು ೩,೦೦೦ ಕೋವಿಶೀಲ್ಡ್ ಲಸಿಕೆಗಳು ಆಗಮಿಸಿದೆಯಾದರೂ, ಕೊಡಗಿನಲ್ಲಿ ಕೋವಿಡ್ ನಿಯಂತ್ರಿತ ಲಸಿಕೆ ಕೊರತೆಯ ಸಮಸ್ಯೆ ಮುಂದುವರೆದಿದೆ. ದೇಶದ ಅನೇಕ ನಗರಗಳಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ದೊರಕುತ್ತಿದೆಯಾದರೂ, ಕೊಡಗಿನಲ್ಲಿ ೬೦ ವರ್ಷ ಮೇಲ್ಪಟ್ಟವರಿಗೆ ಹಾಗೂ ೪೫ ರಿಂದ ೫೯ ವರ್ಷದವರಿಗೆ ೨ನೇ ಲಸಿಕಾ ‘ಡೋಸ್’ ದೊರೆಯುವದೇ ಕಷ್ಟಕರವಾಗಿದೆ.

ಬುಧವಾರದಂದು ೩,೦೦೦ ಲಸಿಕಾ ‘ಡೋಸ್’ಗಳು ಕೊಡಗಿಗೆ ದೊರಕಿದ್ದು, ಅವುಗಳಲ್ಲಿ ೫೦೦ ‘ಡೋಸ್’ಗಳನ್ನು ಮಡಿಕೇರಿಯ ಸಂತ ಮೈಕಲ್ಸ್ ಶಾಲೆಯ ಲಸಿಕಾ ಕೇಂದ್ರಕ್ಕೆ ನೀಡಲಾಯಿತು. ಇನ್ನುಳಿದಂತೆ, ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕು ಲಸಿಕಾ ಕೇಂದ್ರಗಳಿಗೆ ತಲಾ ೧೦೦ ಲಸಿಕಾ ಡೋಸ್‌ಗಳನ್ನು ವಿತರಿಸಲಾಗಿದ್ದು, ಉಳಿದೆಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ ೫೦ ಡೋಸ್‌ಗಳನ್ನು ವಿತರಿಸಲಾಯಿತು. ಲಸಿಕೆಗಳನ್ನು ಬುಧವಾರ ಬೆಳಗ್ಗಿನ ಜಾವ ಹಂಚಿಕೆಮಾಡಲಾಗಿದ್ದು, ವೀರಾಜಪೇಟೆಯ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆಗಳು ಸ್ವಲ್ಪ ತಡವಾಗಿ ಕೈಸೇರಿದವು.

ಕೊಡಗಿಗೆ, ಸೀಮಿತ ಲಸಿಕೆಗಳು ದೊರೆತಿರುವದರಿಂದ, ಎರಡನೇ ಡೋಸ್ ಪಡೆಯುವವರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆರ್.ಸಿ.ಎಚ್ ಅಧಿಕಾರಿ ಡಾ. ಗೋಪಿನಾಥ್‌ರವರು ‘ಶಕ್ತಿ’ಗೆ ತಿಳಿಸಿದರು. ಜಿಲ್ಲೆಗೆ ಆಗಮಸಿದ ಲಸಿಕೆಗಳಲ್ಲಿ ೭೫% ರಷ್ಟು ೨ನೇ ಡೋಸ್‌ಗೆ ಮೀಸಲಿಡಲಾಗಿದ್ದು, ಉಳಿದವು ಮೊದಲನೇ ಡೋಸ್‌ಗೆ ಲಭ್ಯವಿರುತ್ತದೆ. ಆದರೆ, ಜಿಲ್ಲೆಯಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ಕೇವಲ

೫೦ ಲಸಿಕಾ ಡೋಸ್‌ಗಳು ಲಭ್ಯವಿರುವದರಿಂದ, ೬೦ ವರ್ಷ ಮೇಲ್ಪಟ್ಟ ಹಾಗೂ ೪೫-೫೯ ವರ್ಷದವರು

(ಮೊದಲ ಪುಟದಿಂದ) ಮೊದಲನೇ ಲಸಿಕಾ ಡೋಸ್ ಪಡೆಯಬೇಕಾದರೆ ತಾಲೂಕು ಲಸಿಕಾ ಕೇಂದ್ರಗಳಿಗೆ ಹೋಗುವದು ಸೂಕ್ತವೆಂದು ಲಸಿಕಾ ಉಸ್ತುವಾರಿ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಕುಶಾಲನಗರ

ಕುಶಾಲನಗರದ ರೈತ ಸಹಕಾರ ಭವನದ ಕೋವಿಡ್ ಕಾಳಜಿ ಕೇಂದ್ರದಲ್ಲಿ ೪೫ ವರ್ಷ ಮೇಲ್ಪಟ್ಟ ೧೨೦ ಮಂದಿ ನಾಗರೀಕರಿಗೆ ಮಾತ್ರ ಎರಡನೇ ಹಂತದ ಲಸಿಕೆ ವಿತರಣೆ ನಡೆಯಿತು. ಲಸಿಕೆಯ ಕೊರತೆಯಿಂದ ಹೆಚ್ಚಿನ ಜನರಿಗೆ ವಿತರಣೆ ಮಾಡಲು ಸಾಧ್ಯವಾಗದೇ ಹಲವರು ಹಿಂತಿರುಗಿದ ದೃಶ್ಯ ಕಂಡುಬAತು.