ಸಿದ್ದಾಪುರ, ಮೇ ೫: ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕನೋರ್ವ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನೆಲ್ಲಿಹುದಿಕೇರಿ ಗ್ರಾಮದ ಬರಡಿಯಲ್ಲಿ ಬುಧವಾರ ಬೆಳಗ್ಗಿನ ಜಾವ ನಡೆದಿದೆ. ಬರಡಿಯ ನಿವಾಸಿಯಾಗಿರುವ ಸುರೇಂದ್ರ (ಸುರಾ-೫೦) ಎಂಬವರು ತನ್ನ ಸ್ನೇಹಿತ ಜನಾರ್ಧನ ಎಂಬವರೊAದಿಗೆ ಬುಧವಾರ ಬೆಳಗ್ಗಿನ ಜಾವ ೬.೩೦ಕ್ಕೆ ತಮ್ಮ ಬೈಕಿನಲ್ಲಿ ಕೆಲಸಕ್ಕೆಂದು ತೆರಳುವ ಸಂದರ್ಭ ಬರಡಿಯ ಕಾಫಿ ತೋಟವೊಂದರಿAದ ಏಕಾಏಕಿ ಕಾಡಾನೆಯೊಂದು ಬೈಕ್‌ನ ಮೇಲೆ ದಾಳಿ ಮಾಡಿತು ಎನ್ನಲಾಗಿದೆ. ಕಾಡಾನೆ ದಾಳಿಗೆ ಸಿಲುಕಿ ಸುರೇಂದ್ರ ಅವರ ಕೈ ಹಾಗೂ ಭುಜಕ್ಕೆ ಗಾಯವಾಗಿದೆ. ಬೈಕಿನಲ್ಲಿ ಕುಳಿತಿದ್ದ ಹಿಂಬದಿ ಸವಾರ ಜನಾರ್ಧನ ಅವರು ಎದ್ದುಬಿದ್ದು ಓಡಿ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ.

ಕಾಡಾನೆ ದಾಳಿಯಿಂದ ಗಾಯಗೊಂಡ ಸುರೇಂದ್ರ ಅವರಿಗೆ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಶಾಲನಗರ ಉಪ ವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಭೇಟಿ ನೀಡಿ ಗಾಯಾಳುವಿನ ಯೋಗಕ್ಷೇಮ ವಿಚಾರಿಸಿದರು.

(ಮೊದಲ ಪುಟದಿಂದ)

ಪುAಡಾನೆ ದಾಳಿ?!

ನೆಲ್ಲಿಹುದಿಕೇರಿಯ ನಲ್ವತ್ತೆಕರೆ ಬರಡಿ ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡಿನ ಪೈಕಿ ಕುಳ್ಳ ಜಾತಿಯ ಪುಂಡಾನೆಯೊAದು ಇದ್ದು, ಈ ಆನೆಯು ಕಳೆದ ಒಂದು ವರ್ಷಗಳಿಂದ ಬರಡಿ ಭಾಗದಲ್ಲಿ ಬೀಡುಬಿಟ್ಟಿದೆ. ನಲ್ವತ್ತೆಕರೆ - ಬರಡಿ ಗ್ರಾಮದ ಗ್ರಾಮಸ್ಥರ ಮೇಲೆ ಕೂಡ ಇದು ದಾಳಿ ನಡೆಸಲು ಮುಂದಾಗಿತ್ತು. ಇದಲ್ಲದೆ, ನಲ್ವತ್ತೆಕರೆ ಬರಡಿ ಗ್ರಾಮದ ಹಲವಾರು ಮನೆಗಳ ಮೇಲೆ ರಾತ್ರಿ ಸಮಯದಲ್ಲಿ ದಾಳಿ ನಡೆಸಿದ ಘಟನೆಗಳೂ ನಡೆದಿದ್ದು, ಇದರಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇದೀಗ ಮತ್ತೆ ಕಾಡಾನೆ ದಾಳಿ ನಡೆಸಿದ್ದು, ಕೂಡಲೇ ಈ ಪುಂಡಾನೆಯನ್ನು ಸೆರೆಹಿಡಿಯ ಬೇಕೆಂದಯ ಕಾರ್ಮಿಕ ಮುಖಂಡ ಪಿ.ಆರ್. ಭರತ್ ಒತ್ತಾಯಿಸಿದ್ದಾರೆ. ನೆಲ್ಲಿಹುದಿಕೇರಿಯ ಅತ್ತಿಮಂಗಲ ಬಳಿ ಕಾಫಿ ತೋಟಗಳಲ್ಲಿ ನಾಲ್ಕಾರು ಕಾಡಾನೆಗಳು ಬೀಡುಬಿಟ್ಟಿವೆ. ಇದರಿಂದ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

-ವಾಸು