ಮಡಿಕೇರಿ, ಮೇ ೪: ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟಿçÃಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ ಎಂಬಿಬಿಎಸ್ ವೈದ್ಯರ ೭ ಹುದ್ದೆ ಮತ್ತು ತಜ್ಞ ವೈದ್ಯರಲ್ಲಿ ಮಕ್ಕಳ ತಜ್ಞರ ೧ ಹುದ್ದೆ ಮತ್ತು ಅರಿವಳಿಕೆ ತಜ್ಞರು ೧ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಖಾಲಿ ಇರುವ ಎದುರು ಹುದ್ದೆಯಡಿ ಕೋವಿಡ್ ನಿರ್ವಹಣೆಯ ಸಂಬAಧ ೬ ತಿಂಗಳ ಅವಧಿಗೆ ಜನರಲ್ ಮೆಡಿಸಿನ್-೩, ಸ್ತಿçà ರೋಗ ತಜ್ಞರು-೪, ಅರಿವಳಿಕೆ ತಜ್ಞರು-೮, ಮಕ್ಕಳ ತಜ್ಞರು-೭, ಚರ್ಮರೋಗ ತಜ್ಞರು-೧, ರೇಡಿಯೋಲಾಜಿಸ್ಟ್-೧ ಹುದ್ದೆಯನ್ನು ಭರ್ತಿ ಮಾಡಲು ತಾ. ೭ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.

ನೇರ ಸಂದರ್ಶನಕ್ಕೆ ಆಗಮಿಸುವ ಸಂದರ್ಭ ಪೊಲೀಸರು ತಡೆದಲ್ಲಿ ಅಭ್ಯರ್ಥಿಗಳು ಪತ್ರಿಕಾ ಪ್ರಕಟಣೆಯ ಪ್ರತಿ ಮತ್ತು ತಮ್ಮ ಶೈಕ್ಷಣಿಕ ಅರ್ಹತೆಯ ದಾಖಲಾತಿಗಳನ್ನು ತೋರಿಸಿ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ ೦೮೨೭೨-೨೨೫೪೪೩ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ತಿಳಿಸಿದ್ದಾರೆ.