ಮನೆಯಪಂಡ ಎ. ಪೊನ್ನಪ್ಪ ಬೆಂಗಳೂರು, ಮೇ ೪: ಯಾವುದೇ ವ್ಯಕ್ತಿ ತನಗೆ ಅನ್ಯಾಯವಾದಾಗ ತನ್ನ ಇಷ್ಟ ದೈವವನ್ನು ನೆನೆದು ಪರಿಪರಿಯಾಗಿ ನ್ಯಾಯ ಬೇಡುವುದು ಎಲ್ಲ ಸಂಸ್ಕೃತಿಗಳಲ್ಲಿ ಕಾಣಬಹುದು. ಜನಪರರಂತೂ ದೇವರನ್ನು ಬೈಯ್ಯುವ ಮೂಲಕವೇ ತಮ್ಮ ಅಹವಾಲನ್ನು ದೇವರ ಮುಂದಿಡುತ್ತಾರೆ.

ಅನ್ಯಾಯವಾದವರಿಗೆ ದೇವರು ನ್ಯಾಯ ಒದಗಿಸುತ್ತಾನೋ ಇಲ್ಲವೋ, ಆ ಮಾತು ಚರ್ಚೆಗೆ ಬೇಡ. ಆದರೆ ನ್ಯಾಯಾಂಗ ವ್ಯವಸ್ಥೆ ಆ ಕೆಲಸ ಮಾಡುತ್ತದೆ. ಹಾಗಾಗಿ ನ್ಯಾಯಮೂರ್ತಿಗಳು ದೈವ ಸಮಾನರೆಂದರೆ ತಪ್ಪಲ್ಲ ಮತ್ತು ನ್ಯಾಯಾಂಗದ ಕೆಲಸ ನಿಜಾರ್ಥದ ‘‘ದೇವರ ಕೆಲಸ’’ ಎಂದೇ ಹೇಳಬೇಕು.

ಅಂಥದೊAದು ಪವಿತ್ರ ಕಾಯಕವಾದ ನ್ಯಾಯಮೂರ್ತಿ ಸ್ಥಾನಕ್ಕೆ ಗೌರವ ತರುವಂಥ ವ್ಯಕ್ತಿತ್ವ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಮಾಳೇಟಿರ ಪೊನ್ನಪ್ಪ ಚಿಣ್ಣಪ್ಪ ಅವರದ್ದು. ನ್ಯಾಯಾಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಿಶ್ರಾಂತಿಯಲ್ಲಿದ್ದ ೮೦ ವರ್ಷ ವಯಸ್ಸಿನ ಚಿಣ್ಣಪ್ಪ ಅವರು (ಜನನ ೧.೬.೧೯೪೧, ನಿಧನ ೩.೫.೨೦೨೧) ಸೋಮವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

ಮೃತರು ಪತ್ನಿ ಕಾವೇರಿ ರೇಣು (ತಾಮನೆ ಅಪ್ಪನೆರವಂಡ) ಪುತ್ರರಾದ ದ್ಯಾನ್, ಚಿಂತನ್ ಹಾಗೂ ಕುಟುಂಬ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಇಬ್ಬರೂ ಪುತ್ರರು ವಕೀಲರಾಗಿದ್ದಾರೆ. ದ್ಯಾನ್ ಚಿಣ್ಣಪ್ಪ ಪ್ರಸ್ತುತ ಕರ್ನಾಟಕ ಮನೆಯಪಂಡ ಎ. ಪೊನ್ನಪ್ಪ

ಬೆಂಗಳೂರು, ಮೇ ೪: ಯಾವುದೇ ವ್ಯಕ್ತಿ ತನಗೆ ಅನ್ಯಾಯವಾದಾಗ ತನ್ನ ಇಷ್ಟ ದೈವವನ್ನು ನೆನೆದು ಪರಿಪರಿಯಾಗಿ ನ್ಯಾಯ ಬೇಡುವುದು ಎಲ್ಲ ಸಂಸ್ಕೃತಿಗಳಲ್ಲಿ ಕಾಣಬಹುದು. ಜನಪರರಂತೂ ದೇವರನ್ನು ಬೈಯ್ಯುವ ಮೂಲಕವೇ ತಮ್ಮ ಅಹವಾಲನ್ನು ದೇವರ ಮುಂದಿಡುತ್ತಾರೆ.

ಅನ್ಯಾಯವಾದವರಿಗೆ ದೇವರು ನ್ಯಾಯ ಒದಗಿಸುತ್ತಾನೋ ಇಲ್ಲವೋ, ಆ ಮಾತು ಚರ್ಚೆಗೆ ಬೇಡ. ಆದರೆ ನ್ಯಾಯಾಂಗ ವ್ಯವಸ್ಥೆ ಆ ಕೆಲಸ ಮಾಡುತ್ತದೆ. ಹಾಗಾಗಿ ನ್ಯಾಯಮೂರ್ತಿಗಳು ದೈವ ಸಮಾನರೆಂದರೆ ತಪ್ಪಲ್ಲ ಮತ್ತು ನ್ಯಾಯಾಂಗದ ಕೆಲಸ ನಿಜಾರ್ಥದ ‘‘ದೇವರ ಕೆಲಸ’’ ಎಂದೇ ಹೇಳಬೇಕು.

ಅಂಥದೊAದು ಪವಿತ್ರ ಕಾಯಕವಾದ ನ್ಯಾಯಮೂರ್ತಿ ಸ್ಥಾನಕ್ಕೆ ಗೌರವ ತರುವಂಥ ವ್ಯಕ್ತಿತ್ವ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಮಾಳೇಟಿರ ಪೊನ್ನಪ್ಪ ಚಿಣ್ಣಪ್ಪ ಅವರದ್ದು. ನ್ಯಾಯಾಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಿಶ್ರಾಂತಿಯಲ್ಲಿದ್ದ ೮೦ ವರ್ಷ ವಯಸ್ಸಿನ ಚಿಣ್ಣಪ್ಪ ಅವರು (ಜನನ ೧.೬.೧೯೪೧, ನಿಧನ ೩.೫.೨೦೨೧) ಸೋಮವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

ಮೃತರು ಪತ್ನಿ ಕಾವೇರಿ ರೇಣು (ತಾಮನೆ ಅಪ್ಪನೆರವಂಡ) ಪುತ್ರರಾದ ದ್ಯಾನ್, ಚಿಂತನ್ ಹಾಗೂ ಕುಟುಂಬ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಇಬ್ಬರೂ ಪುತ್ರರು ವಕೀಲರಾಗಿದ್ದಾರೆ. ದ್ಯಾನ್ ಚಿಣ್ಣಪ್ಪ ಪ್ರಸ್ತುತ ಕರ್ನಾಟಕ (ಮೊದಲ ಪುಟದಿಂದ) ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಡಗು ಇವುಗಳ ಸಹಯೋಗದಲ್ಲಿ ಕಾವೇರಿ ಹಾಲ್‌ನಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಂದು ಕರ್ನಾಟಕÀ ಪೊಲೀಸ್ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಜಸ್ಟೀಸ್ ಎಂ.ಪಿ. ಚಿಣ್ಣಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆಗ ನಾನು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷನಾಗಿದ್ದೆ.

ಈ ಸಂದರ್ಭದಲ್ಲಿ ಮಾತನಾಡಿದ್ದ ಚಿಣ್ಣಪ್ಪ ಅವರು ಮೂಲಭೂತ ಹಕ್ಕುಗಳಾದ ವಾಕ್ ಸ್ವಾತಂತ್ರö್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರö್ಯ ಕೊಟ್ಟಿರುವುದು ದೇಶದ ಪ್ರಜೆಗಳಿಗೆ ಈ ಎರಡೂ ಸ್ವಾತಂತ್ರö್ಯಗಳಲ್ಲಿ ಪತ್ರಿಕಾ ಸ್ವಾತಂತ್ರö್ಯ ಅಂತರ್ಗತವಾಗಿದೆ. ನಾಗರಿಕರಿಗೆ ಇರುವಷ್ಟೇ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರö್ಯ ಮಾಧ್ಯಮಗಳಿಗೆ ಇದೆ ಎಂದು ತಿಳಿಸಿದ್ದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿಣ್ಣಪ್ಪ ಅವರು ಎರಡು ದಿನ ಮಡಿಕೇರಿಯ ಸಮೀಪದಲ್ಲಿರುವ ‘ಅಬ್ಭಿಧಾಮ’ ಎಸ್ಟೇಟ್ ಸ್ಟೇನಲ್ಲಿ ತಂಗಿದ್ದರು. ಅಲ್ಲಿನ ವಾತಾವರಣ ಮತ್ತು ಸೌಂದರ್ಯವನ್ನು ತುಂಬಾ ಇಷ್ಟಪಟ್ಟಿದ್ದನ್ನು ನನ್ನೊಂದಿಗೆ ಹಲವು ಬಾರಿ ನೆನಪಿಸಿಕೊಂಡಿದ್ದರು.

‘‘ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನ್ಯಾಯ ಒದಗಿಸುವುದರಲ್ಲಿ ಸರ್ವಸಮ್ಮತ ವ್ಯಕ್ತಿ ಆಗಿದ್ದರು. ಅಷ್ಟೇ ಗಂಭೀರವೂ ಕೂಡ’’ ಎಂದು ಸ್ಮರಿಸಿರುವ ಜಿಲ್ಲಾ ನ್ಯಾಯಾಧೀಶೆ ಶ್ರೀಮತಿ ಎಚ್.ಆರ್. ರಾಧಾ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನ್ಯಾಯಮೂರ್ತಿ ಚಿಣ್ಣಪ್ಪ ಅವರು ಚಿಕ್ಕಮಂಗಳೂರು ಜಿಲ್ಲಾ ಆಡಳಿತಾತ್ಮಕ ಉಸ್ತುವಾರಿ ನ್ಯಾಯಾಧೀಶರಾಗಿದ್ದಾಗ ಮುಕ್ಕಾಟಿರ ಅಪ್ಪಯ್ಯ ಅವರ ಪತ್ನಿ ಶ್ರೀಮತಿ ರಾಧಾ ಅವರು ಜಿಲ್ಲೆಯ ನ್ಯಾಯಾಧೀಶೆಯಾಗಿದ್ದರು.

‘‘ಹೈಕೋರ್ಟ್ ನ್ಯಾಯಮೂರ್ತಿ ಚಿಣ್ಣಪ್ಪ ಅವರ ಮುಂದೆ ಒಬ್ಬ ಕಿರಿಯ ವಕೀಲನಾಗಿ ವಾದ ಮಂಡಿಸುವ ಹಲವಾರು ಅವಕಾಶಗಳು ನನಗೆ ದೊರೆತಿದ್ದವು. ಚಿಣ್ಣಪ್ಪ ಅವರು ಕ್ರಿಮಿನಲ್ ಲಾದಲ್ಲಿ ತುಂಬ ಉತ್ತಮವಾದ ಜ್ಞಾನ ಹೊಂದಿದ್ದರು. ನೇರವಾಗಿ ವ್ಯಾಜ್ಯದ ಬುಡಕ್ಕೆ ಹೋಗಿ ಕಾನೂನಾತ್ಮಕ ಪರಿಹಾರ ಕಂಡು ಹಿಡಿಯುವುದರಲ್ಲಿ ನಿಪುಣರಾಗಿದ್ದರು’’ ಎಂದು ಪ್ರತಿಕ್ರಿಯಿಸಿರುವ ಹೈಕೋರ್ಟ್ನ ಮಾಜಿ ಅಡಿಷನಲ್ ಅಡ್ವೋಕೇಟ್ ಜನರಲ್ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ‘‘ನ್ಯಾಯಾಂಗವು ಒಬ್ಬ ನೇರ ನಿಷ್ಠುರ ಯಾವುದೇ ಭಯ ಪಕ್ಷಪಾತವಿಲ್ಲದೆ ನ್ಯಾಯಾದಾನದ ಪ್ರತೀಕವಾಗಿದ್ದ ಅತ್ಯುತ್ತಮ ನ್ಯಾಯಮೂರ್ತಿಯೊಬ್ಬರನ್ನು ಕಳೆದುಕೊಂಡು ಬಡವಾಗಿದೆ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.