*ಮಡಿಕೇರಿ, ಮೇ ೪: ಕೊಡಗು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಅಥವಾ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವ ರೋಗಿಗಳ ಅನುಕೂಲಕ್ಕಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರತಿದಿನ ಬೆಳಿಗ್ಗೆ ೬ ರಿಂದ ರಾತ್ರಿ ೮ ಗಂಟೆವರೆಗೆ, ವಾಹನ ಸೌಲಭ್ಯವು ಮೇ ೧೬ ರವರೆಗೆ ಇರುತ್ತದೆ. ಯಾವುದೇ ರೋಗಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕೆನಿಸಿದರೆ ಈ ಸೌಲಭ್ಯ ಉಪಯೋಗಿಸಿಕೊಳ್ಳಬಹುದು. ಮನೆಯಲ್ಲಿ ಕ್ವಾರಂಟೈನ್‌ನಲ್ಲಿರುವ ರೋಗಿಗಳು ಆಸ್ಪತ್ರೆಗೆ ಹೋಗಬೇಕೆನಿಸಿದರೆ ಪ್ರಯೋಜನ ಪಡೆಯಬಹುದು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಈ ಬಗ್ಗೆ ನಿರ್ದೇಶನ ನೀಡಿರುವುದಾಗಿ, ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್. ಮಂಜುನಾಥ್ ಮಾಹಿತಿ ನೀಡಿದ್ದಾರೆ. ವಾಹನ ಸೌಲಭ್ಯಕ್ಕಾಗಿ ಸಾರ್ವಜನಿಕರು ಯೋಜನೆಯ ಯೋಜನಾಧಿಕಾರಿ ಪದ್ಮಯ್ಯ (ಮೊ. ೯೪೪೯೩೮೬೯೩೬, ೯೧೪೮೯೬೭೪೩೬) ಅಥವಾ ಚಾಲಕ ಮಂಜುನಾಥ್ (೯೭೪೦೭೩೯೪೩೪) ಅವರನ್ನು ಸಂಪರ್ಕಿಸಬಹುದು ಎಂದು ಆನಂದ್ ಕೊಡಗು ಮಾಹಿತಿ ನೀಡಿದ್ದಾರೆ.