ಮಡಿಕೇರಿ, ಮೇ ೪: ಕೋವಿಡ್ ಎಂಬ ಮಹಾಮಾರಿಯ ವಿರುದ್ಧದ ಹೋರಾಟದ ಅಂಗವಾಗಿ ಮೂರ್ನಾಡು ಫ್ರೆಂಡ್ಸ್ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಮೂರ್ನಾಡು ಪಟ್ಟಣವನ್ನು ಸ್ಯಾನಿಟೈಸ್ ಮಾಡಲಾಯಿತು.

ಪಟ್ಟಣದ ಗಾಂಧಿನಗರದಿAದ ಮಡಿಕೇರಿ ರಸ್ತೆಯ ಸರಸ್ವತಿ ನಗರದವರೆಗೆ, ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಸ್ಟೇಷನ್, ದೇವಾಲಯ, ಚರ್ಚ್, ಮಸೀದಿ, ಮೆಡಿಕಲ್ ಕ್ಲಿನಿಕ್, ಮುಖ್ಯ ರಸ್ತೆಯನ್ನು ಸ್ಯಾನಿಟೈಸ್ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಮೂರ್ನಾಡು ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ, ಪೊಲೀಸ್ ಠಾಣೆಯ ಅಧಿಕಾರಿಗಳು ಸಹಕಾರ ನೀಡಿದರು.