ಮಡಿಕೇರಿ, ಮೇ ೪: ಪ್ರತಿ ದಿನ ೫೦೦ ರಿಂದ ೬೦೦ ಕೊರೊನಾ ಪ್ರಕರಣಗಳು ದೃಢವಾಗುತ್ತಿರುವ ಕೊಡಗು ಜಿಲ್ಲೆಗೆ ಮತ್ತೊಂದು ಆಘಾತವೆಂಬAತೆ ಲಸಿಕೆಯ ಕೊರತೆ ಉಂಟಾಗಿದೆ. ತಾ.೪ ರಂದು ಜಿಲ್ಲೆಯಲ್ಲಿದ್ದ ಲಸಿಕೆಯ ಕೊನೆಯ ೧,೦೦೦ ‘ಡೋಸ್’ಗಳನ್ನು ಫಲಾನುಭವಿ ಗಳಿಗೆ ನೀಡಲಾಗಿದ್ದು, ಲಸಿಕೆ ದಾಸ್ತಾನು ಸಂಪೂರ್ಣ ಖಾಲಿಯಾಗಿದೆ. ಜಿಲ್ಲೆಯಾದ್ಯಂತ ಇಂದು ಬಹಳಷ್ಟು ಮಂದಿ ಲಸಿಕೆ ಪಡೆಯಲೆಂದು ಆರೋಗ್ಯ ಕೇಂದ್ರಗಳಿಗೆ ತೆರಳಿ ಲಸಿಕೆ ಸಿಗದೆ ಹಿಂತೆರಳುವAತಾಯಿತು. ಮಡಿಕೇರಿ ನಗರ ಆರೋಗ್ಯ ಕೇಂದ್ರ ದಲ್ಲಿದ್ದ ೧೦೦ ಲಸಿಕಾ ‘ಡೋಸ್’ಗಳು ಸೇರಿದಂತೆ ಜಿಲ್ಲೆಯಾದ್ಯಂತ ಇಂದು ೧,೦೦೦ ‘ಡೋಸ್’ಗಳನ್ನು ನೀಡ ಲಾಯಿತು. ತಾ.೫ ರಂದು (ಇಂದು) ಸುಮಾರು ೩,೦೦೦ ದಷ್ಟು ಲಸಿಕಾ ‘ಡೋಸ್’ಗಳು ಜಿಲ್ಲೆಗೆ ಆಗಮಿಸಲಿವೆ ಎಂದು ಆರ್.ಎಚ್.ಸಿ ಅಧಿಕಾರಿ ಡಾ.ಗೋಪಿನಾಥ್ ಮಾಹಿತಿ ನೀಡಿದ್ದಾರೆ. ೩,೦೦೦ ಡೋಸ್ಗಳಲ್ಲಿ ೭೫ ಶೇ. ಫಲಾನುಭವಿಗಳ ೨ನೇ ‘ಡೋಸ್’ಗೆ ಮೀಸಲಿಡಲಾಗುತ್ತದೆ. ಆದರೆ ಯಾವ ಯಾವ ಲಸಿಕಾ ಕೇಂದ್ರಗಳಲ್ಲಿ ಎಷ್ಟು ಪ್ರಮಾಣದಲ್ಲಿ ವಿತರಣೆ ಮಾಡಲಾಗುತ್ತದೆ ಎಂಬ ಸ್ಪಷ್ಟನೆ ದೊರೆತಿಲ್ಲ.
ಕೋವಿನ್ ಮೂಲಕ ನೋಂದಣಿ ಮಾಡಿದರೂ ದೊರೆಯದ ಲಸಿಕೆ
ಲಸಿಕೆ ಪಡೆಯಲು ಬಹಳಷ್ಟು ಫಲಾನುಭವಿಗಳು ಕೇಂದ್ರ ಸರಕಾರದ ‘ಕೋವಿನ್’ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕಾ ಕೇಂದ್ರಗಳನ್ನು ಆಯ್ಕೆ ಮಾಡಲು ಆ್ಯಪ್ ಮೂಲಕ ಇನ್ನೂ ಅನುಮತಿ ದೊರೆತಿಲ್ಲ. ೪೫ ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕಾ ಕೇಂದ್ರ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರಗಳನ್ನು ಆಯ್ಕೆ ಮಾಡಿ ಸಂಬAಧಿಸಿದ ಆರೋಗ್ಯ ಕೇಂದ್ರಗಳಿಗೆ ತೆರಳಿದ ಫಲಾನುಭವಿಗಳು ಲಸಿಕೆ ಕೊರತೆಯಿಂದ
(ಮೊದಲ ಪುಟದಿಂದ) ಹಿಂತಿರುಗಿದ ಪರಿಸ್ಥತಿ ಇಂದು ಜಿಲ್ಲೆಯಲ್ಲಿ ಎದುರಾಯಿತು.
ಕೋವ್ಯಾಕ್ಸಿನ್ ಇಲ್ಲ : ಇಂದು ೩,೦೦೦ ‘ಡೋಸ್’ ನಷ್ಟು ಲಸಿಕೆ ಜಿಲ್ಲೆಗೆ ಆಗಮಿಸುತ್ತಿದೆ. ಇವುಗಳೆಲ್ಲಾ ಕೋವಿಶೀಲ್ಡ್ ಲಸಿಕೆಗಳಾಗಿವೆ. ಸದ್ಯದ ಮಟ್ಟಿಗೆ ಕೋವ್ಯಾಕ್ಸಿನ್ ದಾಸ್ತಾನು ಜಿಲ್ಲೆಯಲ್ಲಿ ಸಂಪೂರ್ಣ ಖಾಲಿಯಾಗಿದ್ದು, ಮೊದಲನೆಯ ‘ಡೋಸ್’ ಕೋವ್ಯಾಕ್ಸಿನ್ ಪಡೆದವರಿಗೆ ೨ ನೇ ‘ಡೋಸ್’ ಸದ್ಯದಲ್ಲಿ ಸಿಗದೆ ಇರುವ ಆತಂಕ ಎದುರಾಗಿದೆ. ಕೋವ್ಯಾಕ್ಸಿನ್ ಲಸಿಕೆ ಜಿಲ್ಲೆಗೆ ಆಗಮಿಸುವ ಬಗ್ಗೆ ಯಾವ ಸ್ಪಷ್ಟತೆಯೂ ಇಲ್ಲವಾಗಿದೆ.