ಗೋಣಿಕೊಪ್ಪಲು, ಮೇ ೪: ಕೊರೊನಾ ಎರಡನೇ ಅಲೆಯಲ್ಲಿ ಸಿಲುಕಿ ವಿವಿಧ ಆಸ್ಪತ್ರೆಗಳಲ್ಲಿ ಆಮ್ಲಜನಕ ಇಲ್ಲದೇ ರೋಗಿಗಳು ಸಾವನ್ನಪ್ಪುತ್ತಿರುವ ಬೆನ್ನಲ್ಲೆ ಕೊಡಗಿನ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಾವ್ಯರಾಣಿ ಹಾಗೂ ಸಿಬ್ಬಂದಿ ಮಂಗಳವಾರದAದು ಮುಂಜಾನೆ ವರ್ಕ್ಸ್ ಶಾಪ್‌ಗಳಿಗೆ ದಿಢೀರ್ ಭೇಟಿ ನೀಡಿ ಆಮ್ಲಜನಕ ಸಿಲಿಂಡರ್‌ಗಳನ್ನು ಆಯಾಯ ಮಾಲೀಕರುಗಳಿಂದ ಪಡೆದುಕೊಂಡರು.

ಮುAದಿನ ದಿನಗಳಲ್ಲಿ ಪಡೆದ ಸಿಲಿಂಡರ್‌ಗಳನ್ನು ವಾಪಾಸು ನೀಡುವುದಾಗಿ ತಿಳಿಸಿದರು. ಗೋಣಿಕೊಪ್ಪ, ಬಾಳೆಲೆ, ಪೊನ್ನಂಪೇಟೆ ಸೇರಿದಂತೆ ಇನ್ನಿತರ ಪ್ರಮುಖ ನಗರದ ವರ್ಕ್ ಶಾಪ್‌ನಲ್ಲಿದ್ದ ೩೨ ಆಮ್ಲಜನಕ ಜನಕ ಸಿಲಿಂಡರ್‌ಗಳನ್ನು ಪಡೆದುಕೊಂಡರು. ಈ ವೇಳೆ ಕಂದಾಯ ಅಧಿಕಾರಿಗಳಾದ ಮಂಜುನಾಥ್, ಸಿಬ್ಬಂದಿಗಳಾದ ಚಂದ್ರ, ಸುನಿಲ್, ರಾಜೇಶ್, ಪೂವಯ್ಯ, ಉಮೇಶ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಪೊಲೀಸರು ಹಾಜರಿದ್ದರು.

ತಮ್ಮ ವ್ಯಾಪ್ತಿಯ ವರ್ಕ್ ಶಾಪ್‌ನಲ್ಲಿ ಆಮ್ಲಜನಕ ಸಿಲಿಂಡರ್ ಇದ್ದಲ್ಲಿ ಕೆಲವು ತಿಂಗಳ ಮಟ್ಟಿಗೆ ಸಿಲಿಂಡರ್‌ಗಳನ್ನು ತಾಲೂಕು ಆಡಳಿತಕ್ಕೆ ನೀಡುವಂತೆ ಪೊನ್ನಂಪೇಟೆ ತಹಶೀಲ್ದಾರ್ ಕಾವ್ಯರಾಣಿ ಮನವಿ ಮಾಡಿದ್ದಾರೆ.

- ಹೆಚ್.ಕೆ. ಜಗದೀಶ್