ಮಡಿಕೇರಿ, ಮೇ ೪ : ಪ್ರಸ್ತುತ ಸನ್ನಿವೇಶದಲ್ಲಿ ಕಾಫಿ ವಹಿವಾಟು ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ಚೇತರಿಕೆಯನ್ನೇ ಕಾಣದ ಕಾಫಿ ದರ ಇದೀಗ ಮತ್ತಷ್ಟು ಇಳಿಮುಖವಾಗಿರುವದು ಒಂದೆಡೆಯಾದರೆ, ಮತ್ತೊಂದು ಆಘಾತಕಾರಿ ಎಂಬAತೆ ಪ್ರಸ್ತುತ ಕಾಫಿಯನ್ನು ಕೊಂಡುಕೊಳ್ಳುವವರೇ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಈ ಇಕ್ಕಟ್ಟಿನ ಸನ್ನಿವೇಶ ಕಾಫಿ ಉದ್ದಿಮೆಯ ಮೇಲೆ ಭಾರೀ ಗದಾ ಪ್ರಹಾರವನ್ನೇ ನೀಡಿದಂತಾಗಿದೆ.ಜಾಗತಿಕವಾಗಿ ಎದುರಾಗಿರುವ ಕೋವಿಡ್‌ನ ಆಘಾತ ಕಳೆದ ವರ್ಷದಿಂದ ಕಾಫಿ ಉದ್ದಿಮೆಯ ಮೇಲೆ ಪ್ರಭಾವ ಬೀರಲಾರಂಭಿಸಿದ್ದು, ಇದೀಗ ಇದು ಇನ್ನಷ್ಟು ಬಿಗಡಾಯಿಸುವಂತಾಗಿದೆ.ಕೋವಿಡ್‌ನ ಪರಿಸ್ಥಿತಿಯ ಹೊಡೆತದಿಂದಾಗಿ ಕಾಫಿಯ ಬೆಲೆ ದಿನೇ ದಿನೇ ಕುಸಿಯುತ್ತಿದೆ. ರೂ. ೩೨೦೦ - ೩೩೦೦ ರಷ್ಟಿದ್ದ ರೋಬಸ್ಟಾ ಕಾಫಿಯ ಬೆಲೆ ಹಲವು ದಿನಗಳ ಹಿಂದೆ ರೂ. ೨೭೦೦ ರಷ್ಟು ಹಾಗೂ ೪೨೦೦ - ೩೦೦ ರಷ್ಟಿದ್ದ ಅರೆಬಿಕಾ ಧಾರಣೆ ರೂ. ೩೮೦೦ - ೯೦೦ ರಷ್ಟಿಗೆ ಕುಸಿದಿತ್ತು. ಬೆಲೆ ಕುಸಿತದ ಹೊಡೆತ ಒಂದೆಡೆಯಾಗಿದ್ದರೆ ಕಾಫಿ ಬೆಳೆಗಾರರನ್ನು ಇನ್ನಷ್ಟು ಬೆಚ್ಚುವಂತೆ ಮಾಡುತ್ತಿರುವ ಮತ್ತೊಂದು ಅಂಶವೆAದರೆ ಪ್ರಸ್ತುತದ ದಿನಗಳಲ್ಲಿ ಕಾಫಿಯನ್ನು ಕೊಂಡುಕೊಳ್ಳುವವರೇ ಇಲ್ಲ ಎಂಬAತಾಗಿದೆ.

ಭಾರತದ ಕಾಫಿ ಬಹುತೇಕ ವಿದೇಶಗಳಿಗೆ ರಫ್ತಾಗುತ್ತದೆ. ಒಟ್ಟು ಉತ್ಪಾದನೆ ಯಲ್ಲಿ ಶೇ. ೭೫ ರಷ್ಟು ರಫ್ತಾಗುತ್ತಿದ್ದರೆ ಆಂತರಿಕವಾಗಿ ಶೇ. ೨೫ ರಷ್ಟು ಮಾತ್ರ ಬಳಕೆಯಾಗುತ್ತಿತ್ತು. ಇದೀಗ ರಫ್ತು ವಹಿವಾಟು ಬಹುತೇಕ ಸ್ಥಗಿತಗೊಂಡAತಾಗಿದೆ ಎಂಬ ಆಘಾತಕಾರಿ ಅಂಶ ಕೇಳಿಬಂದಿದೆ.

(ಮೊದಲ ಪುಟದಿಂದ) ವಿದೇಶಿ ಮಾರುಕಟ್ಟೆಗಳಲ್ಲಿ ಭಾರತದ ಕಾಫಿಯನ್ನು ಪ್ರಸ್ತುತ ಕೇಳುವವರೇ ಇಲ್ಲ ಎನ್ನಲಾಗುತ್ತಿದೆ. ಕೋವಿಡ್‌ನ ಪರಿಸ್ಥಿತಿ, ಲಾಕ್‌ಡೌನ್‌ನ ಸನ್ನಿವೇಶದಿಂದಾಗಿ ಕಳೆದ ವರ್ಷದ ಸಂಗ್ರಹವೇ ಸಾಕಷ್ಟು ಉಳಿದಿದೆ ಎಂದು ಹೇಳಲಾಗುತ್ತಿದೆ. ಇಲ್ಲಿನ ರಫ್ತುದಾರರ ಬಳಿಯೂ ಕಳೆದ ವರ್ಷದ ಸಂಗ್ರಹ ರಫ್ತಾಗದೆ ಉಳಿದಿರುವದೂ ಇನ್ನೊಂದು ಕಾರಣವಾಗಿದೆ. ಇದರ ನಡುವೆ ಈ ವರ್ಷದ ಕಾಫಿಯೂ ವಹಿವಾಟಿಗೆ ಬಂದಿದೆ. ಭಾರತದ ಕಾಫಿಯನ್ನು ಅಧಿಕವಾಗಿ ಖರೀದಿಸುವ ಇಟಲಿ, ಜರ್ಮನಿ, ನ್ಯೂಯಾರ್ಕ್ನಂತಹ ದೇಶಗಳಲ್ಲಿ ಇದೀಗ ಖರೀದಿದಾರರೇ ಇಲ್ಲ ಎಂಬ ಮಾತು ರಫ್ತುದಾರರಿಂದ ಕೇಳಿ ಬಂದಿದೆ. ಇದಲ್ಲದೆ ಅಂತರರಾಷ್ಟಿçÃಯವಾಗಿ ಕಾಫಿ ಧಾರಣೆಗೆ ಪ್ರಮುಖ ಮಾರುಕಟ್ಟೆಯಾಗಿರುವ ಲಂಡನ್, ನ್ಯೂಯಾರ್ಕ್ ಮಾರುಕಟ್ಟೆಗಳಲ್ಲಿ ಬೆಲೆ ತೀರಾಕುಸಿದಿರುವದೂ ಇಲ್ಲಿ ಧಾರಣೆ ಇಳಿಮುಖವಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿವೆ.

ಹೊಸ ಕಾಫಿ ಖರೀದಿಗೆ ಬೇಡಿಕೆಯೇ ಬರುತ್ತಿಲ್ಲ ಹೊಸ ಬೇಡಿಕೆ ಇಲ್ಲದಿರುವದರಿಂದ ಸಂಗ್ರಹಿತ ಕಾಫಿ ಹಾಗೆಯೇ ಉಳಿದಿದೆ. ಈ ಕಾರಣದಿಂದಾಗಿ ರಫ್ತುದಾರರು, ಕ್ಯೂರಿಂಗ್‌ವರ್ಕ್ಸ್ನವರು ಪ್ರಸ್ತುತ ಕಾಫಿ ಖರೀದಿಯನ್ನೇ ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ. ಬಹುತೇಕ ರಾಷ್ಟçಗಳಲ್ಲಿನ ಆರ್ಥಿಕತೆಯೂ ತೀರಾ ಕುಸಿದಿರುವದೂ ಕಾಫಿ ವಹಿವಾಟಿನ ಕುಂಠಿತಕ್ಕೆ ಇನ್ನೂ ಒಂದು ಕಾರಣವಾಗಿದೆ. ಇದಲ್ಲದೆ, ಭಾರತದ ಕಾಫಿಯನ್ನು ಹೆಚ್ಚಾಗಿ ಖರೀದಿಸುತ್ತಿದ್ದ ರಾಷ್ಟçಗಳು ಇದರ ಬದಲಿಗೆ ಬೇರೆ ರಾಷ್ಟçಗಳಿಂದ ಕಾಫಿ ಖರೀದಿಗೆ ಮುಂದಾಗಿರುವದೂ ಮತ್ತೊಂದು ಹೊಡೆತವಾಗಿದೆ ಎಂದು ಕೆಲವು ಪ್ರಮುಖ ರಫ್ತುದಾರರು ‘ಶಕ್ತಿ’ಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಗಾಣಿಕೆಯ ವೆಚ್ಚ (ಹಡಗು, ವಿಮಾನ) ಕೂಡ ಈ ಹಿಂದಿಗಿAತ ಮೂರುಪಟ್ಟು ಹೆಚ್ಚಾಗಿದೆ ಎಂಬದಾಗಿಯೂ ಅವರು ತಿಳಿಸಿದ್ದಾರೆ.

ಈಗಾಗಲೇ ಹೊಸ ಬೇಡಿಕೆಗಳು ಹೆಚ್ಚಾಗಿ ಬರಬೇಕಾಗಿತ್ತು. ಆದರೆ ಹೊಸ ‘ಕಮಿಟ್‌ಮೆಂಟ್’ಗಳು ಬರುತ್ತಿಲ್ಲ. ಇದರಿಂದ ಇನ್ನಷ್ಟು ತಿಂಗಳು ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯೇ ಅಧಿಕವೆನ್ನಲಾಗಿದೆ. ಈ ನಡುವೆ ಕಾಫಿ ಬೆಲೆ ಕುಸಿತದ ಕಾರಣದಿಂದಾಗಿಯೂ ಬೆಳೆಗಾರರು ಕಾಫಿಯನ್ನು ಮಾರಾಟ ಮಾಡಲು ಹಿಂಜರಿಯುತ್ತಿದ್ದಾರೆ. ತೋಟ ನಿರ್ವಹಣೆ ಸೇರಿದಂತೆ ಕಾಫಿ ಉತ್ಪಾದನೆಗೆ ತಗುಲುವ ವೆಚ್ಚವೇ ಸಿಗದ ಕಾರಣ ಬೆಳೆಗಾರರು ಸಹಜವಾಗಿ ಹೆಚ್ಚಿನ ಬೆಲೆಯ ಆಶಾಭಾವನೆಯೊಂದಿಗೆ ಕಾಫಿಯನ್ನು ಮಾರುಕಟ್ಟೆಗೆ ಬಿಡುತ್ತಿಲ್ಲ. ಪ್ರಸ್ತುತದ ಸನ್ನಿವೇಶ ಇಡೀ ಕಾಫಿ ಉದ್ದಿಮೆಯನ್ನು ಹಾಗೂ ಕಾಫಿಯನ್ನೇ ಅವಲಂಬಿತ, ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಬೆಳೆಗಾರರು, ಕಾರ್ಮಿಕರು, ಇತರ ಅವಲಂಬಿತರ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗುವ ಆತಂಕ ಎದುರಾಗಿದೆ.

ಬೆಂಬಲ ಬೆಲೆಯ ಪ್ರಸ್ತಾಪವೇ ಇಲ್ಲ

ಈ ನಡುವೆ ಕಾಫಿಗೆ ಸರಕಾರದ ಬೆಂಬಲ ಬೆಲೆ ಬೇಕೆನ್ನುವ ಬೆಳೆಗಾರರ ಬೇಡಿಕೆಗೂ ಈ ತನಕ ಸರಕಾರದಿಂದ ಯಾವದೇ ಪ್ರತಿಸ್ಪಂದನ ಸಿಗದೆ ಇದೀಗ ಈ ಪ್ರಸ್ತಾಪವೇ ಕೇಳಿಬರುತ್ತಿಲ್ಲ.

ಸಂಕಷ್ಟಗಳೇ ನೂರಾರು

ದೇಶದಲ್ಲಿ ಕೊಡಗು ಜಿಲ್ಲೆಯಲ್ಲಿ ಅಧಿಕವಾಗಿ ಕಾಫಿ ಉತ್ಪಾದಿಸಲ್ಪಡುತ್ತಿದೆ. ಆದರೆ ಕಳೆದ ಹಲವು ವರ್ಷಗಳಿಂದ ಬಹುತೇಕ ಕಾಫಿಯನ್ನೇ ಅವಲಂಭಿಸಿರುವ ಜನತೆಯ, ಬೆಳೆಗಾರರ ಪರಿಸ್ಥಿತಿ ದಿನೇ ದಿನೇ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದೆ.

ನಿರಂತರವಾಗಿ ಎದುರಾಗುತ್ತಿರುವ ಹವಾಮಾನ ವೈಪರೀತ್ಯ, ಪ್ರಾಕೃತಿಕ ವಿಕೋಪ, ವನ್ಯಪ್ರಾಣಿಗಳ ಉಪಟಳ, ಕಾರ್ಮಿಕರ ಸಮಸ್ಯೆ, ಏರುತ್ತಿರುವ ರಸಗೊಬ್ಬರ ಸೇರಿದಂತೆ ಇನ್ನಿತರ ಅಗತ್ಯತೆಗಳ ಬೆಲೆಯಲ್ಲಿನ ತೀವ್ರ ಹೆಚ್ಚಳ, ಸಾಲ ಬಡ್ಡಿ ಕಟ್ಟಲಾಗದಂತಹ ಪರಿಸ್ಥಿತಿ ಸೇರಿದಂತೆ ಬದುಕಿನ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಎದುರಾಗುತ್ತಿರುವ ಸಂಕಷ್ಟಗಳ ಸರಮಾಲೆಯಿಂದಾಗಿ ಮಲೆನಾಡು ಜಿಲ್ಲೆಯಾದ ಕೊಡಗು ಹಾಗೂ ಕೊಡಗಿನ ಬೆಳೆಗಾರರು ಇನ್ನಿತರ ಅವಲಂಭಿತರ ಪಾಡು ದಿನೇ ದಿನೇ ಶೋಚನೀಯವಾಗುತ್ತಿದೆ.