ವೀರಾಜಪೇಟೆ ಮೇ. ೩: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪಟ್ಟಣದ ಹೃದಯ ಭಾಗದಲ್ಲಿ ಎರಡು ರಾಜಾ ಕಾಲುವೆಗಳಿದ್ದು ರಾಜಾ ಕಾಲುವೆಯ ನೀರು ಹರಿಯುವ ಸೌಲಭ್ಯಕ್ಕಿಂತ ಕಾಲುವೆ ಜಾಗದ ಅತಿಕ್ರಮಣವೇ ಅಧಿಕವಾಗಿದ್ದು ರಾಜಾ ಕಾಲುವೆಯನ್ನು ಅದರ ಉದ್ದ ಅಗಲ ಸರ್ವೆ ಮಾಡಿ ಅತಿಕ್ರಮಣ ಮಾಡಿದವರ ಗುರುತು ಮಾಡುವಂತೆ ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಸಹಾಯಕ ಸರ್ವೇ ನಿರ್ದೇಶಕರಿಗೆ ೪೫ ದಿನಗಳ ಹಿಂದೆಯೇ ಪಟ್ಟಣ ಪಂಚಾಯಿತಿ ಲಿಖಿತ ಪತ್ರ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆನ್ನಲಾಗಿದೆ.

ಮೊದಲ ರಾಜಾ ಕಾಲುವೆ ಇಲ್ಲಿನ ಸುಂಕದ ಕಟ್ಟೆಯಿಂದ ನೆಹರೂ ನಗರದ ಕೆಳಭಾಗದ ಮಾರ್ಗವಾಗಿ ಮಾಂಸಮಾರುಕಟ್ಟೆಯ ಹಿಂಬದಿಯ ಮಾರ್ಗವಾಗಿ ಆರ್ಜಿ ಸೇತುವೆಯನ್ನು ತಲುಪಲಿದೆ. ಪಟ್ಟಣ ಪಂಚಾಯಿತಿಯ ದಾಖಲೆಯ ಪ್ರಕಾರ ಇದು ಅಂದಾಜು ಸುಮಾರು ಎರಡು ಕಿಮೀ ಅಧಿಕ ಉದ್ದವಿದೆ. ಪಟ್ಟಣ ಪಂಚಾಯಿತಿಯು ನಡೆಸಿದ ಸಮೀಕ್ಷೆಯಂತೆ ಸುಮಾರು ೨೫ರಿಂದ ೩೦ ರವರೆಗಿನ ರಾಜಾ ಕಾಲುವೆಯ ಆಜು ಬಾಜಿನಲ್ಲಿ ಜಾಗ ಹೊಂದಿರುವವರು ತಲಾ ಮೂರರಿಂದ ಐದು ಸೆಂಟುಗಳವರಗೆ ಮೇಲ್ನೋಟಕ್ಕೆ ೮೦ ಸೆಂಟುಗಳಿAದ ಒಂದು ಎಕರೆ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ. ಈ ಅತಿಕ್ರಮಣದಿಂದ ಶತಮಾನಗಳ ಇತಿಹಾಸವಿರುವ ರಾಜಾ ಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯಲು ಸಮಸ್ಯೆ ಉಂಟಾಗುತ್ತಿದೆ. ಇದರಿಂದಾಗಿ ರಾಜಾ ಕಾಲುವೆಯ ಅನತಿ ದೂರದಲ್ಲಿರುವ ಮನೆಗಳಿಗೆ ಭಾರೀ ಮಳೆಯಲ್ಲಿ ನೀರು ನುಗ್ಗಿರುವ ಪ್ರಕರಣಗಳು ಪಟ್ಟಣ ಪಂಚಾಯಿತಿಯಲ್ಲಿ ದಾಖಲೆಯಲ್ಲಿದೆ. ನೀರು ನುಗ್ಗುವ ಪ್ರಕರಣಗಳು ಪ್ರತಿ ವರ್ಷ ಮಳೆಗಾಲದಲ್ಲಿ ಪುನರಾವರ್ತನೆಯಾಗುತ್ತಿರು ವುದು ಪಟ್ಟಣ ಪಂಚಾಯಿತಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಮನೆಗಳಿಗೆ ನೀರು

ವೀರಾಜಪೇಟೆ ಪಟ್ಟಣದ ನೆಹರೂ ನಗರದ ಕೆಳಭಾಗದ ಏಳನೇ ಬ್ಲಾಕ್‌ನ ವ್ಯಾಪ್ತಿಗೆ ಬರುವ ರಾಜಾ ಕಾಲುವೆ ಈಚೆಗೆ ಸಣ್ಣ ಮೋರಿ ಒಡೆದು ಸುಮಾರು ನಾಲ್ಕೆöÊದು ಮನೆಗಳಿಗೆ ನೀರು ನುಗ್ಗಿ ಮನೆಯ ಸಾಮಗ್ರಿಗಳನ್ನು ಹಾನಿಗೊಳಿಸಿದಲ್ಲದೆ ಅಲ್ಲಿ ವಾಸಿಸುತ್ತಿದ್ದ ಕುಟುಂಬಗಳನ್ನು ಪಟ್ಟಣ ಪಂಚಾಯಿತಿ ತಾತ್ಕಾಲಿಕವಾಗಿ ಸ್ಥಳಾಂತರಿಸಬೇಕಾಯಿತು. ಈಗ ಸೇತುವೆಯನ್ನು ಈ ವಿಭಾಗದ ಪಟ್ಟಣ ಪಂಚಾಯಿತಿ ಸದಸ್ಯರ ಉಸ್ತುವಾರಿ ಯಲ್ಲಿ ನಿರ್ಮಿಸಲಾಗಿದೆ. ಈ ವರ್ಷದ ಮಳೆಗಾಲದಲ್ಲಿ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಈ ಭಾಗದ ನಿವಾಸಿಗಳು ದೂರುತ್ತಿದ್ದಾರೆ. ಈಗ ಗೋಣಿಕೊಪ್ಪ ರಸ್ತೆಯ ಮಾಂಸ ಮಾರುಕಟ್ಟೆಯ ಬಳಿ ಹಿಂದೆ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಇದನ್ನು ತಪ್ಪಿಸಲು ಲೋಕೋಪಯೋಗಿ ಇಲಾಖೆ ರಸ್ತೆಯ ಮಟ್ಟದಿಂದ ಇನ್ನೂ ಒಂದು ಅಡಿ ಎತ್ತರಕ್ಕೆ ಹೊಸ ಸೇತುವೆಯನ್ನು ನಿರ್ಮಿಸಿ ಸೇತುವೆಯ ಕೆಳಭಾಗದಲ್ಲಿ ನೀರು ಹರಿಯುವಂತೆ ಮಾಡಿದರೂ ಈ ಸೇತುವೆಯ ಪಕ್ಕದ ರಾಜಾಕಾಲುವೆ ಮಧ್ಯ ಭಾಗದ ತನಕ ಮನೆಯೊಂದು ಕಾಲುವೆಯ ಜಾಗವನ್ನು ಅತಿಕ್ರಮಿಸಿ ಕಟ್ಟಿರುವುದರಿಂದ ಈ ಭಾಗದಲ್ಲಿ ಸರಾಗವಾಗಿ ನೀರು ಹರಿಯಲು ಅಡಚಣೆ ಉಂಟಾಗಿದೆ. ರಾಜಾಕಾಲುವೆಯ ಜಾಗವನ್ನು ಅತಿಕ್ರಮಿಸಿ ಮನೆ ಕಟ್ಟಿರುವ ನಿವಾಸಿಗೆ ಪಟ್ಟಣ ಪಂಚಾಯಿತಿ ಜಾಗ ತೆರವು ಮಾಡುವಂತೆ ನೋಟೀಸ್ ಜಾರಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ರಾಜಕಾಲುವೆ ಮಾರಾಟ...!

ಇಲ್ಲಿನ ನೆಹರೂ ನಗರದ ಕೆಳಭಾಗದ ರಾಜಾಕಾಲುವೆಯ ಪಕ್ಕದಲ್ಲಿ ಖಾಸಗಿಯವರಿಂದ ಖರೀದಿಸಿದ ಜಾಗವನ್ನು ಉದ್ಯಮಿಯೊಬ್ಬರು ರಾಜಾ ಕಾಲುವೆಗೆ ತಡೆಗೋಡೆ ನಿರ್ಮಿಸಿ, ಒತ್ತುವರಿ ಜಾಗ ಸೇರಿಸಿ ಮಾರಾಟ ಮಾಡಿದ್ದು ತಡವಾಗಿ ಗೊತ್ತಾಗಿದೆ. ಜಾಗದ ಖರೀದಿದಾರರಿಗೆ ಈ ಜಾಗದಲ್ಲಿ ಅನಮತಿ ಪಡೆದು ಕಟ್ಟಡ ನಿರ್ಮಾಣ ಮಾಡುವುದು ಹಗಲುಗನಸಾಗಿ ಪರಿಣಮಿಸಿದೆ. ರಾಜಾಕಾಲುವೆಯ ಒತ್ತುವರಿಯನ್ನು ಪಟ್ಟಣ ಪಂಚಾಯಿತಿ ತೆರವಿಗೆ ಮುಂದಾದಾಗ ರಾಜಾಕಾಲುವೆಯ ಒತ್ತುವರಿ ಜಾಗ ಅಕ್ರಮ ಮಾರಾಟಗೊಂಡಿದ್ದು ಬಹಿರಂಗಗೊAಡಿದೆ.

ಮಾಂಸ ಮಾರುಕಟ್ಟೆಯ ಹಿಂಬದಿಯಲ್ಲಿರುವ ವಿಜಯನಗರ ಬಡಾವಣೆಯಿಂದ ಹಾದು ಹೋಗಿರುವ ರಾಜಾ ಕಾಲುವೆಯಲ್ಲಿ ಮಳೆಗಾಲದ ಸಮಯದಲ್ಲಿ ನೀರು ಉಕ್ಕಿ ಹರಿದು ಆಜು ಬಾಜಿನ ಮನೆಗಳಿಗೆ ನುಗ್ಗುತ್ತಿದೆ. ಮಳೆಗಾಲದಲ್ಲಂತೂ ಈ ಸಮಸ್ಯೆಯಿಂದ ರಾಜಾ ಕಾಲುವೆ ಬಳಿಯಲ್ಲಿ ಯಾರು ವಾಸಿಸುವಂತಿಲ್ಲ. ಈ ರಾಜಾಕಾಲುವೆ ನಿರಂತರ ಮಲಿನದಿಂದ ಕೂಡಿದ್ದು ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯೇ ಅಧಿಕವಾಗಿದೆ ಎಂದು ಈ ಭಾಗದ ನಿವಾಸಿಗಳು ದೂರಿದ್ದಾರೆ.

ವೀರಾಜಪೇಟೆಯ ಅರಸುನಗರದಿಂದ ಅಪ್ಪಯ್ಯಸ್ವಾಮಿ ರಸ್ತೆಯನ್ನು ಹಾದು ಹೋಗಿರುವ ರಾಜಾಕಾಲುವೆ ಸುಮಾರು ಒಂದೂವರೆ ಕಿ.ಮೀ ಅಂತರವಿದೆ. ಅರಸು ನಗರದ ಬೆಟ್ಟದಿಂದ ಬರುವ ನೀರು ರಾಜಾ ಕಾಲುವೆಯ ಮೂಲಕ ಇಲ್ಲಿನ ಮೂರ್ನಾಡು ರಸ್ತೆಯ ಮಠದ ಗದ್ದೆಯ ಕೊನೆಯ ತನಕ ತಲುಪಿದೆ. ಇಲ್ಲಿಯೂ ರಾಜಾ ಕಾಲುವೆಯ ಅತಿಕ್ರಮಣ ಪರಿಸ್ಥತಿ ಉಂಟಾಗಿದೆ. ಇಲ್ಲಿಯೂ ಅಂದಾಜು ೦.೭೦ ಸೆಂಟುಗಳವರಗೆ ಜಾಗ ಅತಿಕ್ರಮಣವಾಗಿದೆ. ಸರ್ವೇಯಿಂದ ಅತಿಕ್ರಮಣದ ಜಾಗವನ್ನು ಪತ್ತೆ ಹಚ್ಚಬೇಕಾಗಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಾದ ಮಹಮ್ಮದ್ ರಾಫಿ ಅವರು ಕಳೆದ ಡಿಸೆಂಬರ್ ತಿಂಗಳ ಮಾಸಿಕ ಸಭೆಯಲ್ಲಿ ವೀರಾಜಪೇಟೆ ಪಟ್ಟಣದಲ್ಲಿ ಹಾದುಹೋಗಿರುವ ರಾಜಾಕಾಲುವೆಯ ಸಮಸ್ಯೆ ಹಾಗೂ ಜಾಗ ಅತಿಕ್ರಮಣದ ಬಗ್ಗೆ ತೆರವುಗೊಳಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. -ಡಿ.ಎಂ. ರಾಜ್‌ಕುಮಾರ್