ಕೂಡಿಗೆ, ಮೇ. ೩: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವಿವಿಧೆಡೆ ಕೋವಿಡ್ ಆಸ್ಪತ್ರೆ ಆರಂಭಗೊAಡಿದೆ. ಆದರೆ, ಇಲ್ಲೊಂದು ಕೋವಿಡ್ ಆಸ್ಪತ್ರೆ ಸೋಂಕಿತರಿಗೆ ಮನೆ ರೀತಿ ಆಗಿದೆ. ಎಲ್ಲಾ ರೀತಿಯ ವ್ಯವಸ್ಥೆಯೊಂದಿಗೆ ಆತ್ಮಸ್ಥೆöÊರ್ಯ ಹುಟ್ಟಿಸುವ ಕೆಲಸ ಮಾಡುತ್ತಿದೆ.
ಹೌದು.. ಕೂಡಿಗೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ರೀತಿಯ ಅನಾನುಕೂಲತೆ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿಗಳು ಸೋಂಕಿತರ ಮೇಲೆ ತೋರುತ್ತಿರುವ ಕಾಳಜಿ, ಮಾಡುತ್ತಿರುವ ಆರೈಕೆ ಇದಕ್ಕೆ ಕಾರಣವಾಗಿದೆ.
ಕೂಡಿಗೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೮೦ ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಮಡಿಕೇರಿ ಹೊರತುಪಡಿಸಿದರೆ ನಂತರದ ಪ್ರಮುಖ ಆರೈಕೆ ಕೇಂದ್ರ ಕೂಡಿಗೆಯ ಕೇಂದ್ರವಾಗಿದೆ. ಕಳೆದ ವರ್ಷದಿಂದ ಈ ಕೇಂದ್ರ ತನ್ನ ಕಾರ್ಯ ಮುಂದುವರೆಸಿದ್ದು ಸೂಕ್ತ ಸ್ಪಂದನೆ, ಜನಸ್ನೇಹಿ ವಾತಾವರಣ ಒಳಗೊಂಡಿದೆ.
ಸೋAಕಿತರಿಗೆ ಮನರಂಜನೆ
ಕೇಂದ್ರದಲ್ಲಿ ದಾಖಲಾಗಿರುವ ಸೋಂಕಿತರಿಗೆ ಮನರಂಜನೆ ಆಟಗಳು ನೋವು ಮರೆಸಿ, ಆತ್ಮಸ್ಥೆöÊರ್ಯ ಮೂಡಿಸುತ್ತಿದೆ. ಬಿಡುವಿನ ವೇಳೆಯಲ್ಲಿ ಸೋಂಕಿತರ ಬೇಡಿಕೆಯಂತೆ ಕೇರಂ ಬೋರ್ಡ್, ಸ್ನೇಕ್ ಆಂಡ್ ಲ್ಯಾಡರ್, ಚೆಸ್ ಬೋರ್ಡ್ಗಳನ್ನು ಒದಗಿಸಲಾಗಿದೆ. ಮನರಂಜನೆ ಆಟವಾಡುತ್ತ ಸೋಂಕಿತರು ಕಾಲಕಳೆಯುತ್ತಿದ್ದಾರೆ. ಕುಟುಂಬಸ್ಥರನ್ನು ಬಿಟ್ಟು ಬಂದಿರುವ ಸೋಂಕಿತರು ಒಂದಾಗಿ ಕಾಲಕಳೆಯುತ್ತ ಉತ್ತಮ ಸ್ನೇಹಿತರಾಗಿದ್ದಾರೆ.
ಚಿಕಿತ್ಸೆಗೆ ಒಳಗಾಗಿದ್ದ ವಿಶೇಷಚೇತನರೊಬ್ಬರ ಆಸೆಯಂತೆ ಕೇಂದ್ರದಲ್ಲಿ ಅವರ ಹುಟ್ಟುಹಬ್ಬ ಆಚರಿಸಿ ಸಿಹಿ ವಿತರಿಸಿ ಸಂಭ್ರಮಿಸಲಾಗಿದೆ. ಉಳಿದಂತೆ ಬೆಳಗ್ಗೆ ಪ್ರಾಣಾಯಾಮ, ವ್ಯಾಯಾಮಗಳನ್ನು ಮಾಡಿಸಲಾಗುತ್ತಿದೆ. ಕೆಲವರು ಆವರಣದಲ್ಲಿಯೇ ವಾಕಿಂಗ್ ಮಾಡುತ್ತಾರೆ. ಬೆಳಗ್ಗೆ ವ್ಯಾಯಾಮ ಮುಗಿದ ನಂತರ ೯ ಗಂಟೆಗೆ ಉಪಹಾರ, ೧೦.೩೦ ಕ್ಕೆ ರಾಗಿಮಾಲ್ಟ್, ೧೧ ಕ್ಕೆ ಹಣ್ಣುಗಳು, ಮಧ್ಯಾಹ್ನ ೧.೧೫ ಕ್ಕೆ ಚಪಾತಿ, ಅನ್ನ ಸಾಂಬಾರ್, ಮೊಟ್ಟೆ ಊಟ, ಸಂಜೆ ೫ ಗಂಟೆಗೆ ಬಾಳೆ ಹಣ್ಣು, ಬಿಸ್ಕತ್ತು, ಕಾಫಿ, ರಾತ್ರಿ ೭ ೩೦ ಕ್ಕೆ ಊಟ ನೀಡಲಾಗುತ್ತಿದೆ.
ಕೇಂದ್ರಕ್ಕೆ ಒಳ ರೋಗಿಗಳಾಗಿ ದಾಖಲಾಗುವವರಿಗೆ ಬೆಡ್, ಕಂಬಳಿ, ದಿಂಬು, ಪೇಸ್ಟ್, ಬ್ರಶ್, ಸೋಪ್, ತೆಂಗಿನ ಎಣ್ಣೆ ಇರುವ ಕಿಟ್ ವಿತರಿಸಲಾಗುತ್ತದೆ. ಕೇಂದ್ರದಲ್ಲಿ ೫೭ ಮಂದಿ ಒಳರೋಗಿಗಳಾಗಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಓರ್ವ ವೈದ್ಯ, ಮೂವರು ಅರೋಗ್ಯ ಸಹಾಯಕಿಯರು, ಇಬ್ಬರು ಡಿ ಗ್ರೂಪ್ ಸಿಬ್ಬಂದಿಗಳು ಈ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸೋಂಕಿತರ ಸಮಸ್ಯೆಗೆ ಆಸ್ಪತ್ರೆ ಸಿಬ್ಬಂದಿಗಳು ಯಾವುದೇ ಸಂದರ್ಭದಲ್ಲಿ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ. ಕೇವಲ ೫ ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡು ಇದೀಗ ಗುಣಮುಖವಾಗಿ ಮನೆಗೆ ಹಿಂದಿರುಗುತ್ತಿರುವುದು ಸಂತಸ ತಂದಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಎಸ್.ಎಂ.ಭರತ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸೋಂಕಿಗೆ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ. ಆಕ್ಸಿಜನ್ ಕೊರತೆ ವಿಚಾರವಾಗಿ ಜನರಿಗೆ ಭಯ ಉಂಟಾಗಿದೆ. ಎಲ್ಲಾ ಸೋಂಕಿತರಿಗೂ ಆಕ್ಸಿಜನ್ ಅವಶ್ಯಕತೆ ಬರುವುದಿಲ್ಲ. ಸೋಂಕಿತರ ಗುಣಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುವುದು. ಸಾಮಾನ್ಯ ರೋಗಲಕ್ಷಣದವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಿ ಅಗತ್ಯವಿರುವವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುವುದು ಎಂದು ಡಾ.ಭರತ್ ತಿಳಿಸಿದ್ದಾರೆ.