ಮುಳ್ಳೂರು, ಮೇ ೩: ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬರುವ ಜನರಿಂದ ಕೊಡಗು ಜಿಲ್ಲೆಯಾದ್ಯಂತ ಕೋವಿಡ್ ವೈರಸ್ ಸೋಂಕು ಮತ್ತು ಸಾವು ಪ್ರಕರಣ ಹೆಚ್ಚಾಗುತ್ತಿದ್ದು ಕೋವಿಡ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಆಲೂರುಸಿದ್ದಾಪುರ ಗ್ರಾ.ಪಂ.ವತಿಯಿAದ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು ಮತ್ತು ಸಾರ್ವಜನಿಕರಿಗೆ ಸರಕಾರದ ಮಾರ್ಗಸೂಚಿ ಮತ್ತು ನಿಯಮಗಳ ಕುರಿತು ಮಾಹಿತಿ ನೀಡುವ ಮೂಲಕ ಜಾಗೃತಿಗೊಳಿಸಲಾಯಿತು.
ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದಿರುವವರು ೧೦ ದಿನದವರೆಗೆ ಸ್ವಯಂ ಸಂಪರ್ಕ ತಡೆಯಲ್ಲಿ ಮನೆಯಲ್ಲೆ ಇರುವುದು, ಯಾವುದೇ ಆರೋಗ್ಯದ ಸಮಸ್ಯೆ ಕಂಡುಬAದಲ್ಲಿ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ತೆರಳಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳು ವುದು, ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದವರು ಅನಾವಶ್ಯಕ ಹೊರಗಡೆ ಓಡಾಡುವಂತಿಲ್ಲ; ಓಡಾಡುವುದು ಕಂಡುಬAದಲ್ಲಿ ಅಂಥವರ ಮೇಲೆ ಕಾನೂನಿನಂತೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ, ಕೋವಿಡ್ ಸೋಂಕು ಹಿನ್ನೆಲೆ ಮನೆಗಳಲ್ಲಿ ಹೋಮ್ ಕ್ವಾರಂಟೈನ್ ಆದವರು ೧೪ ದಿನಗಳವರೆಗೆ ಮನೆಯೊಳಗೆ ಇರಬೇಕಾಗುತ್ತದೆ. ನಿಯಮ ಮೀರಿ ಮನೆಯಿಂದ ಹೊರಗಡೆ ತಿರುಗಾಡುವುದು ಕಂಡುಬAದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ, ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ಬಂದಿರುವರು ಹೊರಗಡೆ ಓಡಾಡುವುದು ಕಂಡುಬAದಲ್ಲಿ ಗ್ರಾಮಸ್ಥರು ಗ್ರಾ.ಪಂ.ಗೆ ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದೆ. ಈ ಕುರಿತಾದ ಬಿತ್ತಿಪತ್ರವನ್ನು ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಉದ್ದೇಶದ ಹಿನ್ನೆಲೆ ಅಂಗಡಿ-ಮುAಗಟ್ಟುಗಳಿಗೆ ವಿತರಿಸಲಾಯಿತು. ಗ್ರಾ.ಪಂ.ಗೆ ಸೇರಿದ ವಾಹನದಲ್ಲಿ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಧ್ವನಿವರ್ಧಕ ಮೂಲಕ ಮಾಹಿತಿ ನೀಡಲಾಯಿತು. ಲಾಕ್ಡೌನ್ ಮಧ್ಯಾಹ್ನ ೧೨ ಗಂಟೆಯ ವರೆಗಿನ ಬಿಡುವಿನ ಅವಧಿಯಲ್ಲಿ ಗ್ರಾ.ಪಂ.ಪಿಡಿಒ ಪೂರ್ಣಿಮ ಮತ್ತು ಸಿಬ್ಬಂದಿ ಅಂಗಡಿ, ಮುಂಗಟ್ಟುಗಳಿಗೆ ತೆರಳಿ ಗ್ರಾಹಕರು ಮತ್ತು ಸಾರ್ವಜನಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದರು.
-ಭಾಸ್ಕರ್ ಮುಳ್ಳೂರು