ಸೋಮವಾರಪೇಟೆ, ಮೇ ೩: ಸೋಮವಾರಪೇಟೆಯ ಸಂತೆಯನ್ನು ರದ್ದುಗೊಳಿಸಿ ಪಟ್ಟಣ ಪಂಚಾಯಿತಿ ಆದೇಶ ಹೊರಡಿಸಿದ್ದರೂ ಸಹ ಸಂತೆ ದಿನವಾದ ಇಂದು ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯಿತು.
ಸಂತೆ ಮಾರುಕಟ್ಟೆಯ ಪ್ರವೇಶ ದ್ವಾರವನ್ನು ಬಂದ್ ಮಾಡಲಾಗಿತ್ತು. ಸ್ಥಳೀಯ ವರ್ತಕರು ತರಕಾರಿಗಳನ್ನು ಮಾರಾಟ ಮಾಡಲು ಸರ್ಕಾರಿ ಬಸ್ ನಿಲ್ದಾಣದಲ್ಲಿ ಪ.ಪಂ. ಸ್ಥಳಾವಕಾಶವನ್ನು ಗುರುತು ಮಾಡಿತ್ತು. ಇಂದು ಬೆಳಿಗ್ಗೆ ಹೆಚ್ಚಿನ ವರ್ತಕರು ತರಕಾರಿ ಮಾರಾಟಕ್ಕೆ ಮುಂದಾಗುತ್ತಿದ್ದAತೆ, ಬಸ್ ನಿಲ್ದಾಣದಲ್ಲಿ ಜನಜಂಗುಳಿ ಹೆಚ್ಚಿತು.
ಸಂತೆಯನ್ನೂ ಮೀರಿಸುವಂತೆ ನಡೆಯುತ್ತಿದ್ದ ವ್ಯಾಪಾರ ವಹಿವಾಟಿಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ತಡೆಯೊಡ್ಡಿತು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದರೂ ಸಾರ್ವಜನಿಕರು ಸ್ಪಂದಿಸದ ಹಿನ್ನೆಲೆ ಬೇರೆದಾರಿಯಿಲ್ಲದೇ ಪೊಲೀಸರು ಲಾಠಿ ಹಿಡಿದು ಸಂತೆಯನ್ನು ಎತ್ತಿಸಿದರು.
ತರಕಾರಿ ಅಂಗಡಿಗಳಲ್ಲಿ ಕ್ಯೂ: ಪಟ್ಟಣದಲ್ಲಿರುವ ಎರಡು ತರಕಾರಿ ಅಂಗಡಿಗಳಲ್ಲಿ ಸಾರ್ವಜನಿಕರ ಸಾಲು ಕಂಡುಬAತು. ಪಟ್ಟಣ ಸೇರಿದಂತೆ ಸುತ್ತಮುತ್ತಲ ಸಾರ್ವಜನಿಕರು ಸಂತೆ ದಿನವಾದ ಹಿನ್ನೆಲೆ ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ತರಕಾರಿ ಅಂಗಡಿಗಳ ಎದುರು ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ತರಕಾರಿಗಳನ್ನು ಖರೀದಿಸಿದರು.
ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದ ಸಂತೆಯನ್ನು ಪೊಲೀಸ್ ಅಧಿಕಾರಿಗಳು ಹಾಗೂ ಪ.ಪಂ. ಸಿಬ್ಬಂದಿಗಳು ತೆರವುಗೊಳಿಸಿದ ನಂತರ ವರ್ತಕರು ಎಲ್ಲೆಂದರಲ್ಲಿ ವ್ಯಾಪಾರ ಕ್ಕಿಳಿದರು. ಇಂತಹ ಅಂಗಡಿಗಳನ್ನು ಮತ್ತೆ ತೆರವುಗೊಳಿಸುವಲ್ಲಿ ಪೊಲೀಸರು ಸುಸ್ತಾದರು.
ಬೆಳಿಗ್ಗೆ ೬ ಗಂಟೆಯಿAದ ಮಧ್ಯಾಹ್ನ ೧೨ ಗಂಟೆಯವರೆಗೆ ತೆರೆಯಲ್ಪಟ್ಟಿದ್ದ ಮೀನು ಮಾಂಸದ ಅಂಗಡಿಗಳಲ್ಲಿ ಹೆಚ್ಚಿನ ಮಂದಿ ಕಂಡುಬAದರು. ಪಟ್ಟಣದ ಮೆಡಿಕಲ್ ಶಾಪ್, ಖಾಸಗಿ ಕ್ಲಿನಿಕ್ಗಳಲ್ಲಿ ರೋಗಿಗಳು ಹಾಗೂ ಸಂಬAಧಿಕರು ಸರತಿ ಸಾಲಿನಲ್ಲಿ ನಿಂತು ಚಿಕಿತ್ಸೆ ಹಾಗೂ ಔಷಧಿಗಳನ್ನು ಪಡೆದರು.