*ವೀರಾಜಪೇಟೆ, ಮೇ ೩: ವೀರಾಜಪೇಟೆ ತಾಲೂಕಿನಲ್ಲಿ ಕೋವಿಡ್ -೧೯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೀರಾಜಪೇಟೆ ವಕೀಲರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ, ಪಟ್ಟಣ ಪಂಚಾಯಿತಿ, ತಾಲೂಕು ಆಡಳಿತದಿಂದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಆಟೋ ರಿಕ್ಷಾದ ಮೂಲಕ ಧ್ವನಿವರ್ಧಕದಲ್ಲಿ ಕೋವಿಡ್-೧೯ ಕ್ಕೆ ಸಂಬAಧಿಸಿದAತೆ ಜಾಗೃತಿ ಆಧಾರಿತ ಸಂದೇಶಗಳನ್ನು ಸಾರುವ ಜಾಗೃತಿ ಅಭಿಯಾನಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಲೋಕೇಶ್ ಚಾಲನೆ ನೀಡಿದರು.
ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಧೀಶರು, ಕೊರೊನಾ ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಅತಿ ಹೆಚ್ಚು ಕೊರೊನಾ ಪ್ರಕರಣಗಳು ಇರುವ ದೇಶದ ನೂರಐವತ್ತು ಜಿಲ್ಲೆಗಳ ಪೈಕಿ ಕರ್ನಾಟಕದ ಹತ್ತು ಜಿಲ್ಲೆಗಳಿವೆ. ಅದರಲ್ಲಿ ಕೊಡಗು ಮೊದಲ ಸ್ಥಾನದಲ್ಲಿದೆ. ಇದು ನಿಜಕ್ಕೂ ಆತಂಕಕಾರಿ. ನಾವೆಲ್ಲರೂ ಜಾಗೃತ ರಾಗಿರಬೇಕು. ಯಾವುದೇ ಅಂಗಡಿಗೆ ಹೋದರೂ ಹೆಚ್ಚು ಸಮಯ ವ್ಯರ್ಥ ಮಾಡದೇ ಬೇಗ ಮನೆಗೆ ಬಂದು ಕೈತೊಳೆದುಕೊಂಡು ಎಚ್ಚರದಿಂದ ಇರಬೇಕು. ಸುಮ್ಮನೆ ಓಡಾಡುವು ದರಿಂದ ನಾವೂ ಪೊಲೀಸರಿಗೂ ಹೆಚ್ಚು ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಮಾಡುತ್ತಿದ್ದೇವೆ. ಅವರದ್ದು ಒಂದು ಕುಟುಂಬವಿರುತ್ತದೆ, ಅವರಿಗೂ ಜೀವನವಿರುತ್ತದೆ. ಈಗಾಗಲೇ ೧೨೦ ಪೊಲೀಸರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಧೈರ್ಯದಿಂದಿರಿ, ಪ್ರಕೃತಿಯಲ್ಲಿ ಒಳ್ಳೆಯ ಆಮ್ಲಜನಕ ಸಿಗುತ್ತಿದೆ. ಇಂಥ ಸಮಯದಲ್ಲಿ ಇಂಥ ಜಾಗದಲ್ಲಿರುವುದು ನಮ್ಮ ಪುಣ್ಯ. ಎಲ್ಲರೂ ಜಾಗರೂಕರಾಗಿದ್ದು ಕೊರೊನಾ ಸರಪಳಿಯನ್ನು ಮುರಿಯೋಣ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಯತಿರಾಜ್ ಮಾತನಾಡುತ್ತಾ, ವೀರಾಜಪೇಟೆಯಲ್ಲಿ ಏಪ್ರಿಲ್‌ನಿಂದ ಇಲ್ಲಿಯತನಕ ೧೬೭೨ ಪ್ರಕರಣಗಳು ಕಂಡು ಬಂದಿದೆ. ೧೨೩೨ ಸಕ್ರಿಯ ಪ್ರಕರಣಗಳಿವೆ. ಪೆರುಂಬಾಡಿಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡಿದ್ದೀವಿ. ಮಾಸ್ಕ್ ಸರಿಯಾಗಿ ಹಾಕಿಕೊಳ್ಳಿ. ಕೈಯ್ಯನ್ನು ಪದೇ ಪದೆ ತೊಳೆದುಕೊಳ್ಳುವುದರಿಂದ ಸೋಂಕು ತಡೆಯಬಹುದು. ಆರೋಗ್ಯವಂತರು ಹೊರಗೆ ಬಂದು ಸಾಮಗ್ರಿ ಖರೀದಿಸಿಕೊಂಡು ಹೋಗುವಂತೆ ಮನವಿ ಮಾಡಿದರು. ತಹಶೀಲ್ದಾರ್ ಯೋಗಾನಂದ್ ಅವರು ಕೂಡಾ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹೇಮಕುಮಾರ್ ಕೊಡಗು ಜಿಲ್ಲೆ ವಿದ್ಯಾವಂತರ ಜಿಲ್ಲೆ; ಆದರೂ ಜಾಸ್ತಿ ಜಾಗರೂಕ ರಾಗಿರುತ್ತಿಲ್ಲ. ಕೊರೊನಾ ಬಾಯಿ ಮತ್ತು ಮೂಗಿನ ಮೂಲಕ ಪ್ರವೇಶಿಸುತ್ತಿದೆ. ಮಾಸ್ಕ್ ಅನ್ನು ಪ್ರತಿದಿನ ಬದಲಾಯಿಸಬೇಕು. ವಾರ್ಡ್ ಸದಸ್ಯರ ಮುಂದಾಳತ್ವದಲ್ಲಿ ಸಮಿತಿ ಮಾಡಲಾಗಿದೆ. ಹೊರಜಿಲ್ಲೆಯವರು ಬಂದವರು ಮನೆಯಲ್ಲಿ ಇದ್ದರೇ ಕೊರೊನಾ ಪರೀಕ್ಷೆ ಮಾಡಿಸಿ ಕೊಳ್ಳಬೇಕು. ಹೋಮ್ ಕ್ವಾರಂಟೈನ್ ನಲ್ಲಿರಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನ್ಯಾಯಾಲಯದ ಸಿಬ್ಬಂದಿಗಳು, ವಕೀಲರು, ಆರಕ್ಷಕರು, ಪಟ್ಟಣ ಪಂಚಾಯತಿ ಹಾಗೂ ತಾಲೂಕು ಕಚೇರಿಯ ಸಿಬ್ಬಂದಿಗಳು ಹಾಜರಿದ್ದರು.