ಶನಿವಾರಸಂತೆ, ಮೇ ೨ : ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿ ಯ ಮಾದೇಗೋಡು ಗ್ರಾಮಕ್ಕೆ ಜಲ್ ಜೀವನ್ ಮಿಷನ್ ಯೋಜನೆಯಡಿ ನೀರಿನ ಟ್ಯಾಂಕ್ ನಿರ್ಮಾಣ ಮಾಡುವ ಸ್ಥಳವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಪರಿಶೀಲಿಸಿದರು.
ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಇಂಜಿನಿಯರ್ ರಂಜಿತ್, ಕಾರ್ಯದರ್ಶಿ ಕುಶಾಲಪ್ಪ, ಬಿಲ್ ಸಂಗ್ರಾಹಕ ಮಧು, ಸಿಬ್ಬಂದಿ ಪವನ್, ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.