ಸಿದ್ದಾಪುರ, ಮೇ.೨ : ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನೆÀ್ನಲೆಯಲ್ಲಿ ಗ್ರಾ.ಪಂ ಅಧ್ಯಕ್ಷ ಸಾಬು ವರ್ಗೀಸ್ ಹಾಗೂ ಪಿ.ಡಿ.ಓ ಅನಿಲ್ ಕುಮಾರ್ ನೇತೃತ್ವದಲ್ಲಿ ಗ್ರಾಮದ ವಿವಿಧೆಡೆಯಲ್ಲಿ ಮನೆ ಮನೆಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು. ಅಲ್ಲದೇ ಎಲ್ಲಾ ವಾರ್ಡ್ಗಳಲ್ಲಿ ಕೊರೊನಾ ಟಾಸ್ಕ್ಫೋರ್ಸ್ ತಂಡದಿAದ ಸಭೆ ನಡೆಸಿ ಗ್ರಾಮಸ್ಥರು ತಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳುವಂತೆ ಸೂಚಿಸಲಾಯಿತು. ಮಾಸ್ಕ್ ಧರಿಸದೆ ಮನೆಯಿಂದ ಹೊರ ಬರುವವರಿಗೆ ರೂ.೧೦೦ ದಂಡ ವಿಧಿಸಲಾಗುತ್ತಿದೆ. ಭಾನುವಾರದಂದು ಸಿದ್ದಾಪುರದಲ್ಲಿ ಸಂತೆ ರದ್ದಾಗಿತ್ತು. ದಿನಸಿ ಹಾಗೂ ತರಕಾರಿ ಅಂಗಡಿಗಳಲ್ಲಿ ನೂಕುನುಗ್ಗಲು ಕಂಡುಬAತು. ಸಿದ್ದಾಪುರ ಠಾಣಾಧಿಕಾರಿ ಮೋಹನ್‌ರಾಜ್ ನೇತೃತ್ವದಲ್ಲಿ ಪೊಲೀಸರು ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರು.