ಗೋಣಿಕೊಪ್ಪಲು, ಮೇ ೨ : ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ನಿಟ್ಟೂರು ಗ್ರಾಮದಲ್ಲಿರುವ ನೂರಾರು ಆದಿವಾಸಿಗಳಿಗೆ ನಿಟ್ಟೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ ಮಾಸ್ಕ್ ವಿತರಿಸಿದರು.

ಮುಂಜಾನೆಯ ಸಮಯದಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿರುವ ಕಾರ್ಮಿಕರು ಮಾಸ್ಕ್ ಧರಿಸದೇ ತೆರಳುತ್ತಿರುವುದನ್ನು ಮನಗಂಡ ಇವರು ಸಾವಿರಕ್ಕೂ ಹೆಚ್ಚು ಮಾಸ್ಕ್ಗಳನ್ನು ಪಂಚಾಯಿತಿ ಅಧ್ಯಕ್ಷ ಚಕ್ಕೆರ ಸೂರ್ಯ ಅಯ್ಯಪ್ಪ ಅವರಿಗೆ ಹಸ್ತಾಂತರ ಮಾಡಿದರು.

ಅಲ್ಲದೆ ವಿವಿಧ ಭಾಗಕ್ಕೆ ತೆರಳಿ ಕಾರ್ಮಿಕರಿಗೆ, ಮಕ್ಕಳಿಗೆ, ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಿ ಕೋವಿಡ್ ನಿಯಮ ಪಾಲಿಸುವಂತೆ ಜಾಗ್ರತೆ ಮೂಡಿಸಿದರು. ಈ ವೇಳೆ ಬಿಜೆಪಿ ಪ್ರಮುಖರಾದ ಎಂ.ಜಿ. ಸೋಮಯ್ಯ, ಜಿ.ಬಿ. ಸುದೀಪ್, ಕೆ.ಕೆ. ಉತ್ತಯ್ಯ, ವಿ.ಎಂ. ಸುರೇಶ್, ಎಂ.ಕೆ. ರಾಜನ್ ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.