ಪೆರಾಜೆ, ಮೇ ೨: ಭಾರೀ ಗಾಳಿ ಮಳೆಯಿಂದಾಗಿ ಮಡಿಕೇರಿ-ಸುಳ್ಯ ರಾಜ್ಯ ಹೆದ್ದಾರಿಯ ಪೆರಾಜೆಯಲ್ಲಿ ಬಿದ್ದ ಮರದ ಕೊಂಬೆಗಳನ್ನು ಪೆರಾಜೆ - ಕುಂದಲ್ಪಾಡಿ ರಸ್ತೆಯ ಮಧ್ಯೆ ಅಲ್ಲಲ್ಲಿ ಬಿದ್ದಮರಗಳನ್ನು ಚಿಗುರು ಯುವಕಮಂಡಲದ ಸದಸ್ಯರು ಶ್ರಮದಾನದ ಮೂಲಕ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಸಂದರ್ಭ ಚಿಗುರು ಯುವಕ ಮಂಡಲದ ಅಧ್ಯಕ್ಷ ಕಿರಣ್ ಕುಂಬಳಚೇರಿ, ಕಾರ್ಯದರ್ಶಿ ದಿವಾಕರ ಮಜಿಕೋಡಿ, ಖಜಾಂಚಿ ಯತಿಶ್ಯಾಂ ಕುಂಬಳಚೇರಿ ಗ್ರಾಮ ಪಂಚಾಯತ್ ಸದಸ್ಯರಾದ ಉದಯಚಂದ್ರ ಮತ್ತು ಶುಭಾಶ್ ಬಂಗಾರಕೋಡಿ ಸೇರಿದಂತೆ ಚಿಗುರು ಯುವಕ ಮಂಡಲದ ಪದಾಧಿಕಾರಿ ಗಳು, ಸದಸ್ಯರು ಭಾಗವಹಿಸಿದ್ದರು.