ಶನಿವಾರಸಂತೆ, ಮೇ ೨ : ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಕೋವಿಡ್-೧೯ ನಿಯಂತ್ರಣಕ್ಕಾಗಿ ಕೊರೊನಾ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಪಂಚಾಯಿತಿ ಸಿಬ್ಬಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಡಿಯಂ ಹೈಪೋಕ್ಲೋರಾಯಿಡ್ ಸಿಂಪಡಿಸಿದರು. ಚೈನ್ ಲಿಂಕ್ ತೆಗೆದು ಹಾಕಲು ಕೆಲ ಕ್ರಮಗಳನ್ನು ಕೈಗೊಳ್ಳಲಾಯಿತು. ಅಂಗಡಿಗಳ ಮುಂಭಾಗ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಅಗತ್ಯ ವಸ್ತು ಖರೀದಿಸಲು ಅವಕಾಶ ಕಲ್ಪಿಸಲಾಯಿತು. ಮಾಸ್ಕ್ ಧರಿಸದವರಿಗೆ, ಹೆಲ್ಮೆಟ್ ಇಲ್ಲದವರಿಗೆ ದಂಡ ವಿಧಿಸಲಾಯಿತು.
ಈ ಸಂದರ್ಭ ಸದಸ್ಯ ಎಸ್.ಎನ್. ರಘು ಮಾತನಾಡಿ, ಜೀವ ಇದ್ದರೆ ಮಾತ್ರ ಜೀವನ ಸಾಗಿಸಬಹುದು. ಸ್ವಯಂ ಪ್ರೇರಣೆಯಿಂದ ಜೀವ ರಕ್ಷಿಸಿಕೊಳ್ಳಬೇಕು. ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ವ್ಯಾಪಾರ ನಡೆಸಲು ಅವಕಾಶ ನೀಡಲಾಗುವುದು. ಅಗತ್ಯ ವಸ್ತು ಮಾರಾಟ ಮಾಡುವ ಪ್ರತಿ ವ್ಯಾಪಾರಿ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಹಾಜರಾಗಬೇಕು ಎಂದು ಕರೆ ನೀಡಿದರು.
ಪಂಚಾಯಿತಿ ಅಧ್ಯಕ್ಷೆ ಸರೋಜಾಶೇಖರ್ ಮಾತನಾಡಿ, ಶೀತ, ಕೆಮ್ಮು ಅಥವಾ ಕೊರೊನಾ ಲಕ್ಷಣ ಕಂಡುಬAದ ತಕ್ಷಣ ಉದಾಸೀನ ಮಾಡದೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಬೇಕು ಎಂದರು.
ಪಿಎಸ್‌ಐ ಹೆಚ್.ಈ. ದೇವರಾಜ್ ಮಾತನಾಡಿ, ವಿವಾಹ ಸಮಾರಂಭಕ್ಕೆ ಕನಿಷ್ಟ ೫೦ ಮಂದಿ ಮಾತ್ರ ಹಾಜರಾಗಬೇಕು. ಸರಕಾರದ ಮಾರ್ಗ ಸೂಚಿಯನ್ನು ಅನುಸರಿಸದವರು ಕಠಿಣ ಶಿಕ್ಷೆಗೆ ಗುರಿಯಾಗಬೇಕು ಎಂದು ಎಚ್ಚರಿಸಿದರು.
ಪರವಾನಗಿ ಇಲ್ಲದೆ, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದವರಿಗೆ ದಂಡ ವಿಧಿಸಲಾಯಿತು. ಅಗತ್ಯ ಸಾಮಾನು ಖರೀದಿಸಿದ ತಕ್ಷಣ ಮನೆಗೆ ತೆರಳುವಂತೆ ಎಚ್ಚರಿಸಿದ್ದರಿಂದ ಅನಗತ್ಯವಾಗಿ ಅಡ್ಡಾಡುತ್ತಿದ್ದವರನ್ನು ನಿಯಂತ್ರಿಸಲಾಯಿತು.
ಪAಚಾಯಿತಿ ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರಾದ ಸರ್ದಾರ್ ಅಹಮ್ಮದ್, ಆದಿತ್ಯಗೌಡ, ಫರ್ಜಾನ ಶಾಯಿದ್, ಪಿಡಿಓ ಬಿ.ಜೆ. ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯಾಚಾರ್, ಬಿಲ್ ಕಲೆಕ್ಟರ್ ವಸಂತ್‌ಕುಮಾರ್, ಸಿಬ್ಬಂದಿ ಧರ್ಮರಾಜ್, ಫೌಜಿಯಾ, ಲೀಲಾವತಿ, ನಾಗೇಶ್, ಶಿವಕುಮಾರ್, ಸುರೇಶ್, ನಂದಕುಮಾರ್, ಪೊಲೀಸ್ ಇಲಾಖೆಯ ಎಎಸ್‌ಐ ಹೆಚ್.ಎಂ. ಗೋವಿಂದ್, ಸಿಬ್ಬಂದಿ ಲೋಕೇಶ್, ಪ್ರದೀಪ್, ಹರೀಶ್, ಬೋಪಣ್ಣ, ಮುರಳಿ, ಚೆನ್ನಕೇಶವ, ರವಿಚಂದ್ರ, ಸೋಮಶೇಖರ್ ಹಾಜರಿದ್ದರು.