ಮೇ ೩ನ್ನು ಪತ್ರಿಕಾ ಸ್ವಾತಂತ್ರö್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಪತ್ರಿಕೆಗಳ ನ್ಯಾಯ ನಿಷ್ಠೆ, ಕರ್ತವ್ಯಪರತೆ, ಸತ್ಯ ವರದಿ ಪ್ರಕಟಣೆ ಮೊದಲಾದವುಗಳಿಗೆ ಈ ದಿನ ಹಿಡಿದ ಕೈಗನ್ನಡಿಯಾಗಿದೆ. ಪ್ರಜಾಪ್ರಭುತ್ವದ ಆಧಾರ ಸ್ತಂಭವೇ ಪತ್ರಿಕಾ ಸ್ವಾತಂತ್ರö್ಯ. ಎಲ್ಲಿ ಪತ್ರಿಕಾ ಸ್ವಾತಂತ್ರö್ಯದ ದಮನವಾಗುವುದೋ ಅಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರುವುದು. ಪ್ರಜಾಜಾಗೃತಿ, ಅರಿವು ಮೂಡಿಸಲು ಪತ್ರಿಕಾ ಸ್ವಾತಂತ್ರö್ಯ ಅತ್ಯಂತ ಅವಶ್ಯವಿದೆ.
ಕೊಲ್ಕಾತ್ತಾದಲ್ಲಿ ೧೭೮೦ ರಲ್ಲಿ ಜೇಮ್ಸ್ ಆಗಸ್ಟಸ್ ಹೆಕ್ಕಿ ಬೆಂಗಾಲ್ ಗೆಜೆಟ್ ಪತ್ರಿಕೆ ಆರಂಭಿಸಿದರು. ಇಂಡಿಯಾ ಗೆಜೆಟ್, ಮದ್ರಾಸ್ ಕೊರಿಯರ್, ಬಾಂಬೆ ಹೆರಾಲ್ಡ್, ದಿಗ್ದದರ್ಶನ ಮೊದಲಾದ ಪತ್ರಿಕೆಗಳನ್ನು ಜೇಮ್ಸ್ ಆಗಸ್ಟಸ್ ಹೆಕ್ಕಿ ಆರಂಭಿಸಿದರು. ಬಾಂಬೆ ಟೈಮ್ಸ್ ಅನ್ನು ೧೮೩೮ ರಲ್ಲಿ ಬಾಂಬೆ ದ್ವಾರಕ್ನಾಥ್ ಠಾಗೋರ್ ಆರಂಭಿಸಿದರು. ಭಾರತೀಯ ಪತ್ರಿಕೋದ್ಯಮದ ಪಿತಾಮಹನೆಂಬ ಗೌರವಕ್ಕೆ ಜೇಮ್ಸ್ ಅಗಸ್ಟಸ್ ಹೆಕ್ಕಿ ಪಾತ್ರರಾಗಿದ್ದಾರೆ. ಕಿಟಲ್ ಮತ್ತು ಮ್ಯಾಕ್ ನಿರ್ವಹಿಸಿದ ಪಾಕ್ಷಿಕ ಸಂಗ್ರಹ ವಿಚಿತ್ರ ವರ್ತಮಾನವಾಗಿದೆ. ತಿಲಕರ ಕೇಸರಿ ಪತ್ರಿಕೆ ಅನುವಾದ ರೂಪದಲ್ಲಿ ಡಾ. ಎನ್.ಎಸ್. ಹರ್ಡಿಕರ್ ನೇತೃತ್ವದ ಕನ್ನಡ ಕೇಸರಿ ಪತ್ರಿಕೆಯಾಗಿದೆ. ಧರ್ಮೇತರ ಪತ್ರಿಕೆಯಾಗಿ ಪ್ರಾರಂಭವಾದ ಕಾಸಿ ಉಲ್ ಮುಲ್ಕ್ ಪ್ರಪ್ರಥಮ ಪತ್ರಿಕೆಯಾಗಿದೆ. ಶೇಷಾದ್ರಿ ಗವಾಯಿಯವರು ಐದು ದಶಕಗಳ ಕಾಲ ಗಾಯನಗಂಗಾ ಪತ್ರಿಕೆ ನಡೆಸಿಕೊಂಡು ಬಂದರು. ಸೂರ್ಯೋದಯ ಕನ್ನಡ ಪ್ರಪ್ರಥಮ ವೃತ್ತ ಪತ್ರಿಕೆಯಾಗಿದೆ. ಕನ್ನಡದ ಮೊದಲ ವಾರಪತ್ರಿಕೆ ಸುಬುದ್ಧಿ ಪ್ರಕಾಶ, ಮಂಗಳೂರು ಸಮಾಚಾರ ಕೂಡ ಪ್ರಥಮ ವೃತ್ತ ಪತ್ರಿಕೆಯಾಗಿದೆ. ಅಚ್ಚು ಮೊಳೆಯ ಮುದ್ರಣ ಪ್ರಚಾರಕ್ಕೆ ಬಂದ ಮೇಲೂ ದಾರವಾಡದಿಂದ ಮುದ್ರಿತವಾಗುತ್ತಿದ್ದ ಪತ್ರಿಕೆ ಚಂದ್ರೋದಯವಾಗಿದೆ. ೧೯೨೨ ರಲ್ಲಿ ಆರ್. ಕಮಲಮ್ನವರು ಪ್ರಾರಂಭಿಸಿದ ಮಹಿಳಾ ಪತ್ರಿಕೆ ವಿಷಯಕ ವೇದಿಕೆ ಸರಸ್ವತಿ, ಮತೀಯ ಪತ್ರಿಕೆಗಳಲ್ಲಿ (ಮುಂಬೈ ೧೯೫೭) ಹೆಚ್ಚು ಪ್ರಸಾರ ಪಡೆದಿದ್ದ ಕ್ರೆöÊಸ್ತ ಮಾಸ ಪತ್ರಿಕೆ ಕಾವಲಿನ ಬುರುಜು. ಪಿ.ಜಿ. ಶ್ರೀನಿವಾಸ್ ಪ್ರಪ್ರಥಮವಾಗಿ ಲಘು ಬರಹ ಅಂಕಣ ಆರಂಭಿಸಿದರು. ಈ ಅಂಕಣದ ಹೆಸರು ಸಂಚಾರಿಯ ಡೈರಿ, ಕನ್ನಡ ಸಾಹಿತಿಗಳಾದ ಯು.ಆರ್. ಅನಂತಮೂರ್ತಿ ರುಜುವಾತು, ಮಾಸ್ತಿಯವರು ಪ್ರಾರಂಭಿಸಿದ್ದ ಜೀವನ ಪತ್ರಿಕೆ, ಅ.ನ. ಕೃಷ್ಣರಾಯರ ವಿಶ್ವವಾಣಿ, ಪಾಟೀಲ ಪುಟ್ಟಪ್ಪನವರ ಪ್ರಪಂಚ ಮುಂತಾದವು. ‘ವಿಕಟ ಪ್ರತಾಪ’ ಹಾಸ್ಯ ಪತ್ರಿಕೆಗಳಲ್ಲಿಯೇ ಪ್ರಥಮ ಪತ್ರಿಕೆಯಾಗಿದೆ. ಅಂತೆಯೇ ಕೊಡಗಿನ ಹೆಮ್ಮೆಯ ಪ್ರಪ್ರಥಮ ಕನ್ನಡ ದಿನಪತ್ರಿಕೆ ಶಕ್ತಿ ಪತ್ರಿಕೆಯಾಗಿದೆ. ಸ್ಥಾಪಕ ಸಂಪಾದಕರು ಬಿ.ಎಸ್. ಗೋಪಾಲಕೃಷ್ಣ ಅವರು.
ಎಲ್ಲಿ ಪತ್ರಿಕೆಗಳಿಗೆ ಮುಕ್ತ ಸ್ವಾತಂತ್ರö್ಯವಿರುವುದೋ ಅಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗುವುದು. ಸಂವಿಧಾನದ ಯಶಸ್ವಿ ಕಾರ್ಯಾಚರಣೆಗೂ ಪತ್ರಿಕಾ ಸ್ವಾತಂತ್ರö್ಯ ಬಹುಮುಖ್ಯ. ಪತ್ರಿಕಾ ಸ್ವಾತಂತ್ರö್ಯದ ಮೂಲಕ ನಮ್ಮ ಪ್ರಜಾಪ್ರಭುತ್ವ ಸದಾ ಯಶಸ್ಸು ಕಾಣಲಿ.
- ಹರೀಶ್ ಸರಳಾಯ, ಮಡಿಕೇರಿ.