ಕೂಡಿಗೆ, ಮೇ ೨: ಗ್ರಾಮೀಣ ಪ್ರದೇಶದ ಮನೆಗಳಿಂದ ಹೊರಹೋಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ತಮ್ಮ ತಮ್ಮ ಮನೆಯ ಅಂಗಳದಲ್ಲಿ ಇಂಗು ಗುಂಡಿಗಳನ್ನು ತೆಗೆಯಲಾಗಿದೆ. ಆದರೆ ಅವುಗಳಿಗೆ ಅಳವಡಿಸಲು ಬೇಕಾಗುವ ಸಾಮಗ್ರಿಗಳ ಹಣವನ್ನು ಆರು ತಿಂಗಳು ಕಳೆದರೂ ಬಿಡುಗಡೆಯಾಗದೆ ಇಂಗುಗುAಡಿ ಕಾಮಗಾರಿ ಅರ್ಧಕ್ಕೆ ನಿಂತಿವೆ.
ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಅನುಕೂಲ ಮಾಡಿಕೊಟ್ಟಿದೆ. ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ಮತ್ತು ಗ್ರಾಮ ಸಭೆಯಲ್ಲಿ ಗ್ರಾಮದ ಎಲ್ಲಾ ಮನೆಗಳಲ್ಲಿ ಇಂಗು ಗುಂಡಿಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿತ್ತು. ಸಾಮಗ್ರಿಗಳ ಹಣವನ್ನು ಕಾಮಗಾರಿಯು ಪ್ರಾರಂಭ ಆದ ತಕ್ಷಣವೇ ನೀಡುವುದಾಗಿ ಹೇಳಲಾಗಿತ್ತು. ಇದುವರೆಗೂ ಸಾಮಗ್ರಿಗಳ ಹಣ ಸರಕಾರದಿಂದ ಬಿಡುಗಡೆಯಾಗದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೬೪ ಜನರಿಗೆ ಇಂಗುಗುAಡಿಯ ಕಾಮಗಾರಿಯ ಹಣ ಇನ್ನೂ ಬಿಡುಗಡೆಯಾಗಿಲ್ಲ. ಸಂಬAಧಿಸಿದ ಇಲಾಖೆಯವರು ಶೀಘ್ರವಾಗಿ ಹಣವನ್ನು ಬಿಡುಗಡೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.