ಕುಶಾಲನಗರ, ಏ. ೨೯: ಸೇವಾ ಭಾರತಿ ಮತ್ತು ಕೊಡಗು ಜಿಲ್ಲಾ ರಕ್ತ ನಿಧಿ ಕೇಂದ್ರದ ಸಹಯೋಗ ದೊಂದಿಗೆ ಕುಶಾಲನಗರದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕುಶಾಲನಗರ ವಾಸವಿ ಮಹಲ್ ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ ಸುಮಾರು ೫೦ ಮಂದಿ ಪಾಲ್ಗೊಂಡಿದ್ದರು.
ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಶಿಬಿರ ನಡೆಯಿತು. ಕೋವಿಡ್ ಲಸಿಕೆ ಪಡೆದ ನಂತರ ಸ್ವಲ್ಪ ಕಾಲ ರಕ್ತದಾನ ಮಾಡಲು ಅವಕಾಶ ಇರುವುದಿಲ್ಲ. ಆ ನಿಟ್ಟಿನಲ್ಲಿ ಈ ಶಿಬಿರ ಏರ್ಪಡಿಸಲಾಯಿತು ಎಂದು ಸೇವಾ ಭಾರತಿ ಪ್ರಮುಖ ಅಮೃತ್ರಾಜ್ ತಿಳಿಸಿದ್ದಾರೆ.
ರಕ್ತ ನಿಧಿ ಕೇಂದ್ರದ ಡಾ. ಕರುಂಬಯ್ಯ ನೇತೃತ್ವದಲ್ಲಿ ದಾನಿಗಳಿಂದ ರಕ್ತ ಸಂಗ್ರಹ ಕಾರ್ಯ ನಡೆಯಿತು. ಸೇವಾ ಭಾರತಿಯ ಕೆ. ಪ್ರವೀಣ್, ನವನೀತ್,
ಮಂಜುನಾಥ್, ಜನಾರ್ದನ್, ಸಂತೋಷ್, ರಾಜೀವ್, ಜಿ.ಎಲ್. ನಾಗರಾಜ್, ಎಂ.ವಿ. ನಾರಾಯಣ ಮತ್ತಿತರರು ಇದ್ದರು.