ಮಡಿಕೇರಿ, ಏ. ೨೯: ಕರ್ಣಂಗೇರಿ ಮತ್ತು ಇಬ್ನಿವಳವಾಡಿಯ ಕೆಲವು ಕಾಫಿ ತೋಟಗಳಿಗೆ ಗುರುವಾರ ಕಾರ್ಮಿಕ ಇಲಾಖೆ ಅಧಿಕಾರಿ ಯತ್ನಟ್ಟಿ ಅವರು ಭೇಟಿ ನೀಡಿ ಕೋವಿಡ್-೧೯ರ ೨ನೇ ಅಲೆಯ ಕುರಿತು ತಿಳುವಳಿಕೆ ನೀಡಿದರು.
ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿ ಕೆಲಸ ಮಾಡಿಸಲು ಆಡಳಿತ ಮಂಡಳಿಯವರಿಗೆ ಸಲಹೆ ಮಾಡಿದರು. ವಲಸೆ ಕಾರ್ಮಿಕರ ಮಾಹಿತಿಯನ್ನು ನಮೂನೆ-ಬಿ ಯಲ್ಲಿ ತಯಾರಿಸಿ ಸಲ್ಲಿಸಲು ತಿಳಿಸಿದರು. ವಲಸೆ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡು ಕೇಂದ್ರ ಸರ್ಕಾರದ, ರಾಜ್ಯ ಸರ್ಕಾರ ಮತ್ತು ಜಿಲ್ಲಾಧಿಕಾರಿ ಅವರು ಆಗಿಂದಾಗ್ಗೆ ಹೊರಡಿಸುವ ಕೋವಿಡ್-೧೯ ಸಂಬAಧಿಸಿದ ಆದೇಶ, ಸುತ್ತೋಲೆ ಮತ್ತು ನಿಯಮಗಳನ್ನು ಪಾಲಿಸುವಂತೆ ತಿಳುವಳಿಕೆ ನೀಡಲಾಯಿತು.
ಕಾರ್ಮಿಕರ ಕುಂದು ಕೊರತೆಗಳನ್ನು ವಿಚಾರಿಸಲಾಯಿತು. ಇಬ್ನಿ ಸ್ಪಾ ರೆಸಾರ್ಟ್ಗೆ ಭೇಟಿ ನೀಡಿ ಕೋವಿಡ್-೧೯ರ ಕುರಿತು ಮಾಹಿತಿ ನೀಡಲಾಯಿತು ಹಾಗೂ ವಲಸೆ ಕಾರ್ಮಿಕರ ಮಾಹಿತಿಯನ್ನು ನಮೂನೆ-ಬಿಯಲ್ಲಿ ಒದಗಿಸುವಂತೆ ತಿಳಿಸಲಾಯಿತು.