ಮಡಿಕೇರಿ, ಏ. ೨೮: ಮಡಿಕೇರಿ ನಗರಸಭಾ ಚುನಾವಣೆಯ ಮತ ಎಣಿಕಾ ಕಾರ್ಯ ತಾ. ೩೦ ರಂದು (ನಾಳೆ) ಸಂತ ಜೋಸೆಫರ ಶಾಲೆಯಲ್ಲಿ ನಡೆಯಲಿದ್ದು, ಬೆಳಿಗ್ಗೆ ೮ ಗಂಟೆಯಿAದ ಆರಂಭವಾಗಲಿದೆ. ಮತ ಎಣಿಕಾ ಕೇಂದ್ರದ ಒಳಗೆ ಅಭ್ಯರ್ಥಿ ಅಥವಾ ಅಭ್ಯರ್ಥಿ ಪರ ಏಜೆಂಟ್ ಈ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ತೆರಳಲು ಅವಕಾಶವಿದೆ ಎಂದು ತಹಶೀಲ್ದಾರ್ ಮಹೇಶ್ ತಿಳಿಸಿದ್ದಾರೆ.

ಮತ ಎಣಿಕೆಯು ಮೂರು ಕೊಠಡಿಗಳಲ್ಲಿ ನಡೆಯಲಿದ್ದು, ಒಂದು ಕೊಠಡಿಯಲ್ಲಿ ಎರಡು ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದೆ. ಒಂದು ಟೇಬಲ್‌ನಲ್ಲಿ ಮತ ಎಣಿಕೆ ಮೇಲ್ವಿಚಾರಕರು, ಮತ ಎಣಿಕೆ ಸಹಾಯಕ ಮತ್ತು ಡಿ ದರ್ಜೆ ನೌಕರರು ಇರಲಿದ್ದಾರೆ. ಹಾಗೆಯೇ ಮತ ಎಣಿಕೆಯು ನಾಲ್ಕು ಸುತ್ತುಗಳಲ್ಲಿ ನಡೆಯಲಿದೆ. ಮೊದಲ ಕೊಠಡಿಯಲ್ಲಿ ೧ ರಿಂದ ೮, ಎರಡನೇ ಕೊಠಡಿಯಲ್ಲಿ ೯ ರಿಂದ ೧೬, ಮೂರನೇ ಕೊಠಡಿಯಲ್ಲಿ ೧೭ ರಿಂದ ೨೩ ವಾರ್ಡ್ಗಳ ಮತ ಎಣಿಕಾ ಕಾರ್ಯ ನಡೆಯಲಿದೆ ಎಂದು ಮಹೇಶ್ ಮಾಹಿತಿ ನೀಡಿದ್ದಾರೆ.

ಮತ ಎಣಿಕೆ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಇರಲಿದ್ದಾರೆ. ಮತ ಎಣಿಕೆಗೆ ೧೮ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಹಶೀಲ್ದಾರ್ ಹೇಳಿದ್ದಾರೆ.

ನಗರಸಭೆ ಚುನಾವಣೆಯ ಮತದಾನ ಸಂಬAಧ ನಗರಸಭೆಯ ೨೩ ವಾರ್ಡ್ಗಳ ೨೭ ಮತಗಟ್ಟೆಗಳಲ್ಲಿ ೧೩,೧೬೬ ಪುರುಷ ಮತ್ತು ೧೩,೭೧೮ ಮಹಿಳಾ ಮತದಾರರು ಹಾಗೂ ಮೂವರು ಇತರೆ ಒಟ್ಟು ೨೬,೮೮೭ ಮತದಾರರಲ್ಲಿ, ೭೮೮೯ ಪುರುಷ ಮತ್ತು ೮೦೪೮ ಮಹಿಳೆಯರು ಒಟ್ಟು ೧೫,೯೩೭ ಮಂದಿ

(ಮೊದಲ ಪುಟದಿಂದ) ಮತದಾರರು ಮತ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆ ಶೇ. ೫೯.೨೭ ರಷ್ಟು ಮತದಾನವಾಗಿದೆ ಎಂದು ತಹಶೀಲ್ದಾರ್ ಮಹೇಶ್ ತಿಳಿಸಿದ್ದಾರೆ. ಮತ ಎಣಿಕೆ ಕೇಂದ್ರದ ವ್ಯಾಪ್ತಿಯಲ್ಲಿ ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಭ್ಯರ್ಥಿಗಳ ಬೆಂಬಲಿಗರಿಗೆ ಹಾಜರಿರಲು ಅವಕಾಶವಿರುವುದಿಲ್ಲ. ಈ ಬಗ್ಗೆ ತಾ. ೨೯ ರಂದು (ಇಂದು) ಖಚಿತಗೊಳ್ಳಲಿದೆ.