ಕೂಡಿಗೆ, ಏ. ೨೭: ದಂಡಿನಮ್ಮ ಮತ್ತು ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ಗ್ರಾಮ ದೇವತೆಯ ವಾರ್ಷಿಕ ಹಬ್ಬದ ಅಂಗವಾಗಿ ಬಸವಣ್ಣ ದೇವರ ವಾನ್ಯ ಕಾರ್ಯಕ್ರಮವು ಸರಳವಾಗಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಇದರ ಅಂಗವಾಗಿ ದೇವಾಲಯ ಆವರಣ ದಲ್ಲಿ ವಿಶೇಷ ಪೂಜೆಯನ್ನು ನಡೆಸಲಾ ಯಿತು. ಪೂಜಾ ಕೈಂಕರ್ಯವನ್ನು ಚಂದ್ರಮುರುಳಿ ಆರಾದ್ಯ ನೆರವೇರಿಸಿದರು. ಪೂಜಾ ಕಾರ್ಯ ಕ್ರಮದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಕೆ. ಭೀಮಣ್ಣ, ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ ಸೇರಿದಂತೆ ಸಮಿತಿಯ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.