ಮಡಿಕೇರಿ, ಏ. ೨೬: ಹಾತೂರು ಗ್ರಾಮದ ಹಬೀಬುರ್ ರೆಹಮಾನ್ ಅವರ ಪತ್ನಿ ಹಮೀದ್ ಖಾತೂನ್ ನಾಪತ್ತೆಯಾಗಿರುವುದಾಗಿ ಹಬೀಬುರ್ ರೆಹಮಾನ್ ಗೋಣಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಾತೂರಿನ ಕೆ.ಎ. ಕಾರ್ಯಪ್ಪ ಅವರ ಲೈನ್‌ಮನೆಯಲ್ಲಿ ವಾಸವಿದ್ದ ಹಮೀದ್ ಖಾತೂನ್ ಫೆ. ೨೮ ರಂದು ತನ್ನ ಮಗಳನ್ನು (ಮಾಜೂನಿ) ಕರೆದುಕೊಂಡು ಮನೆಬಿಟ್ಟು ತೆರಳಿದ್ದು, ಇನ್ನೂ ಕೂಡ ಹಿಂತೆರಳಿಲ್ಲ ಎಂಬದಾಗಿ ಆಕೆಯ ಪತಿ ರೆಹಮಾನ್ ದೂರು ನೀಡಿದ್ದಾರೆ. ಮಹಿಳೆ ಅಥವಾ ಮಗು ಪತ್ತೆಯಾದಲ್ಲಿ ಗೋಣಿಕೊಪ್ಪ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಪೊಲೀಸ್ ಪ್ರಕಟಣೆ ಕೋರಿದೆ.