ಸುAಟಿಕೊಪ್ಪ, ಏ. ೨೬: ಸುಂಟಿಕೊಪ್ಪ ಮಾರುಕಟ್ಟೆಯಲ್ಲಿ ಅನಾಥವಾಗಿ ಜೀವನ ನಡೆಸುತ್ತಿದ್ದ ಗೌರಮ್ಮ ಎಂಬ ವೃದ್ಧೆ ಅನಾರೋಗ್ಯ ದಿಂದ ಗುರುವಾರ ಮಡಿಕೇರಿ ಆಸ್ಪತ್ರೆಯಲ್ಲಿ ಮೃತಪಟ್ಟರು. ತಕ್ಷಣ ಕಾರ್ಯಪ್ರವೃತ್ತರಾದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಪೌರಕಾರ್ಮಿಕ ರಾಮಚಂದ್ರ ಮತ್ತು ಇತರ ಸಿಬ್ಬಂದಿಗಳು ಮೃತದೇಹವನ್ನು ಶನಿವಾರ ಸುಂಟಿಕೊಪ್ಪ ಹಿಂದೂ ರುದ್ರ ಭೂಮಿಯಲ್ಲಿ ಶವಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದರು.

ವೃದ್ಧೆ ಮೃತರಾದ ೩ನೇ ದಿನವಾದ ತಾ. ೨೫ ರಂದು ಬೆಳಿಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ಎ. ಶಬೀರ್ ಅವರು ಬೂದಿಯನ್ನು ರಾಶಿ ಮಾಡಿ ಹಿಂದೂ ಪದ್ಧತಿಯಂತೆ ಕಾರ್ಯವನ್ನು ನೆರವೇರಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಪಿಡಿಒ ವೇಣು ಗೋಪಾಲ್, ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯ ರಫೀಕ್ ಖಾನ್, ಪೌರಕಾರ್ಮಿಕ ರಾಮಚಂದ್ರ ಹಾಜರಿದ್ದರು.