ಪೊನ್ನಂಪೇಟೆ, ಏ. ೨೫: ಬಿಜೆಪಿ ಸ್ಥಾಪನಾ ಮುಖಂಡರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಹಾಗೂ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಪೊನ್ನಂಪೇಟೆ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿವಸ್ ಆಚರಿಸಲಾಯಿತು.ಈ ಸಂದರ್ಭ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಲ್ಲಮಾಡ ಪ್ರಭು, ತಾಲೂಕು ಉಪಾಧ್ಯಕ್ಷ ಚೋಡುಮಾಡ ಶಾಮ್, ಕೃಷಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಬೀರ್ ದಾಸ್, ಕೃಷಿ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ತೋರಿರ ವಿನು, ಪೊನ್ನಂಪೇಟೆ ಶಕ್ತಿಕೇಂದ್ರದ ಪ್ರಮುಖರಾದ ಕೋಟೆರ ಕಿಶನ್, ಮೂಕಳೇರ ಮಧುಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.