ಮಡಿಕೇರಿ ಏ. ೨೫ : ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹಾಗೂ ಹುದ್ದೆಗಳಿಂದ ೮ ಮಂದಿಯನ್ನು ಮುಂದಿನ ೬ ವರ್ಷಗಳ ಕಾಲ ಕೆಪಿಸಿಸಿ ಸೂಚನೆಯಂತೆ ಅಮಾನತು ಗೊಳಿಸಲಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.
ನಗರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ ೨ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮೋಹನ್ ಹಾಗೂ ಇವರಿಗೆ ಬೆಂಬಲ ಸೂಚಿಸಿರುವ ಮಹಮ್ಮದ್ ಹಯಾತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ನಿಯಮ ಬಾಹಿರವಾಗಿ ನಡೆದುಕೊಂಡ ಕೆ.ಎಂ. ವೆಂಕಟೇಶ್, ವಾರ್ಡ್ ಸಂಖ್ಯೆ ೧೧ ರ ಸ್ವತಂತ್ರ ಅಭ್ಯರ್ಥಿ ತಜುಸಂ, ವಾರ್ಡ್ ಸಂಖ್ಯೆ ೧೯ರ ಸ್ವತಂತ್ರ ಅಭ್ಯರ್ಥಿ ಸುನಿಲ್ ನಂಜಪ್ಪ, ವಾರ್ಡ್ ಸಂಖ್ಯೆ ೨೨ರ ಸ್ವತಂತ್ರ ಅಭ್ಯರ್ಥಿ ಬೆನೆಡಿಕ್ಟ್ ಹಾಗೂ ಅವರ ಬೆಂಬಲಕ್ಕೆ ನಿಂತಿರುವ ಗಿಲ್ಬರ್ಟ್ ಲೋಬೋ ಮತ್ತು ವಾರ್ಡ್ ಸಂಖ್ಯೆ ೨೩ರ ಸ್ವತಂತ್ರ ಅಭ್ಯರ್ಥಿ ಹೆಚ್.ಕೆ. ಪ್ರೇಮ ಅವರುಗಳನ್ನು ಅಮಾನತುಗೊಳಿಸಿ ರುವುದಾಗಿ ಅವರು ಮಾಹಿತಿ ನೀಡಿದ್ದಾರೆ.