ಕಣಿವೆ, ಏ. ೨೫: ಆಧುನಿಕತೆ ಹಾಗೂ ತಂತ್ರಜ್ಞಾನ ಬೆಳೆದಂತೆ ಯುವಜನರು ಹಾಗೂ ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಮರೆಯಾಗುತ್ತಿದೆ ಎಂದು ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್. ಮೂರ್ತಿ ವಿಷಾದಿಸಿದರು.

ಕುಶಾಲನಗರದಲ್ಲಿ ಶುಕ್ರವಾರ ಸರಳವಾಗಿ ಹಮ್ಮಿಕೊಂಡ ವಿಶ್ವ ಪುಸ್ತಕ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಿನ ಹಿರಿಯ ಅನೇಕ ಸಾಹಿತಿಗಳು ಬರೆದಿರುವಂತಹ ವಿವಿಧ ಪುಸ್ತಕಗಳು ಸೇರಿದಂತೆ ರಾಮಾಯಣ ಮಹಾಭಾರತದಂತಹ ಮಹಾನ್ ಗ್ರಂಥಗಳನ್ನು ಮಕ್ಕಳು ಓದಿ ತಿಳುವಳಿಕೆ ಹೊಂದಿದರೆ ಜೀವನವಿಡೀ ಉತ್ತಮ ಸಂಸ್ಕಾರವAತರಾಗಿ ಬದುಕುವ ಶಕ್ತಿಯನ್ನು ಈ ಪುಸ್ತಕಗಳು ಕಲಿಸುತ್ತವೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿ ಮಾಗಡಿಯ ಸರಕಾರಿ ಐಟಿಐ ಕಾಲೇಜು ಉಪನ್ಯಾಸಕ ಹೆಚ್.ಎಸ್. ಗಿರೀಶ್ ಮಾತನಾಡಿದರು. ವೈದ್ಯಕೀಯ ವಿದ್ಯಾರ್ಥಿನಿ ದೀಪಿಕಾ ಮೂರ್ತಿ, ಇಂಜಿನಿಯರಿAಗ್ ವಿದ್ಯಾರ್ಥಿ ಕೆ.ಎಂ. ಹರ್ಷಿತ್, ವೇದಾವತಿ ಹಾಗೂ ಸೋಮೇಶ್ವರ ಬಡಾವಣೆಯ ಪುಟಾಣಿ ಮಕ್ಕಳು ಪಾಲ್ಗೊಂಡಿದ್ದರು.