ಮಡಿಕೇರಿ, ಏ. ೨೪: ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ.) ಸಂಘಟನೆ ವತಿಯಿಂದ ಸಂಘಟನೆಯ ಬೇಡಿಕೆಯಾದ ಬುಡಕಟ್ಟು ಸ್ಥಾನಮಾನ ಸೇರಿದಂತೆ ಕೊಡವ ಲ್ಯಾಂಡ್ ಘೋಷಣೆಯ ಹಕ್ಕೊತ್ತಾಯದಂತೆ ನಾಲ್ಕೇರಿಯ ಕೋಲ್‌ಮಂದ್‌ನಲ್ಲಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇತ್ತೀಚೆಗೆ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಜನಜಾಗೃತಿ ಮೂಡಿಸಲಾಯಿತು. ನಾಚಪ್ಪ ಅವರು ಈ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಚಿರಿಯಪಂಡ ಸಚಿನ್ ನಿರೂಪಿಸಿ, ಸುಳ್ಳಿಮಾಡ ಗೋಪಾಲ್ ಸ್ವಾಗತಿಸಿದರು. ತೀತಿರ ಶಾನ್ ನಾಣಯ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಚಿರಿಯಪಂಡ ಕಾಳಯ್ಯ, ಅಜ್ಜಿಕುಟ್ಟಿರ ಲೋಕೇಶ್, ಕಳ್ಳಂಗಡ ಅನೀಶ್ ನಾಚಪ್ಪ, ತೀತಿರ ಮನು ಮಾದಪ್ಪ, ಕಳ್ಳಿಚಂಡ ದಿಲೀಪ್ ಮತ್ತಿತರರು ಪಾಲ್ಗೊಂಡಿದ್ದರು.