ವರದಿ -ಚಂದ್ರಮೋಹನ್

ಕುಶಾಲನಗರ, ಏ. ೨೪: ವಾರಾಂತ್ಯದ ಲಾಕ್‌ಡೌನ್ ನಡುವೆ ಮೀಸಲು ಅರಣ್ಯ ವ್ಯಾಪ್ತಿಯಿಂದ ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದ್ದ ಪ್ರಕರಣವೊಂದು ಪತ್ತೆಯಾಗಿದೆ. ಕುಶಾಲನಗರ ಸಮೀಪದ ಹೊಸಕೋಟೆ ಬಳಿ ಅತ್ತೂರು ಮೀಸಲು ಅರಣ್ಯದ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಹಿಟಾಚಿ, ಟಿಪ್ಪರ್ ಬಳಸಿ ಲೋಡುಗಟ್ಟಲೆ ಮಣ್ಣು ಸಾಗಿಸುತ್ತಿದ್ದ ಬಗ್ಗೆ ನಾಗರಿಕರ ದೂರು ಕೇಳಿ ಬಂದಿತ್ತು.

ರಸ್ತೆ ಅಗಲೀಕರಣ ಹೆಸರಿನಲ್ಲಿ ಅಕ್ರಮ ಮಣ್ಣು ಸಾಗಾಟದ ಬಗ್ಗೆ ‘ಶಕ್ತಿ’ ಸ್ಥಳಕ್ಕೆ ತೆರಳಿ ಪ್ರಕರಣ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಕೆಲಸ ಸ್ಥಗಿತ ಗೊಳಿಸಲು ಸೂಚನೆ ನೀಡಿದ್ದು, ಮೀಸಲು ಅರಣ್ಯದ ಗಡಿಯಿಂದ ತೆಗೆದ ಮಣ್ಣನ್ನು ಅಲ್ಲಿಗೆ ತುಂಬಲು ಕೆಲಸಗಾರರಿಗೆ ತಾಕೀತು ಮಾಡಿದ್ದಾರೆ.

ಮೀಸಲು ಅರಣ್ಯದ ಬದಿಯಿಂದ ಬುಡಸಹಿತ ಮರಗಳ ಹನನ ಶಂಕೆ ಕೂಡ ವ್ಕಕ್ತಗೊಂಡಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳು ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

ಕುಶಾಲನಗರ ಸಮೀಪದ ಹೊಸಕೋಟೆ ಬಳಿ ಅತ್ತೂರು ಮೀಸಲು ಅರಣ್ಯದ ಬಳಿ ಮೆಟ್ನಹಳ್ಳ ಬಳಿಯಿಂದ ಕಂಬಿಬಾಣೆ ಕಡೆಗೆ ಕೇಂದ್ರ ಸರ್ಕಾರದ ವರದಿ -ಚಂದ್ರಮೋಹನ್