ಸೋಮವಾರಪೇಟೆ, ಏ. ೨೪: ಪಟ್ಟಣ ಸಮೀಪದ ಹಾನಗಲ್ಲು ಬಾಣೆ ಹಾಗೂ ಚೌಡೇಶ್ವರಿ ಬ್ಲಾಕ್ನಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯಗಳಲ್ಲಿ ವಾರ್ಷಿಕ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಹಾನಗಲ್ಲು ಬಾಣೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಕಳೆದ ೩ ದಿನಗಳಿಂದ ಪೂಜಾ ಕೈಂಕರ್ಯಗಳು ನಡೆದವು. ದೇವಾಲಯದಲ್ಲಿ ಪ್ರಾರ್ಥನೆ, ಗಣಪತಿ ಹೋಮ, ಕಲಶ ಮೆರವಣಿಗೆ, ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.
ಚೌಡೇಶ್ವರಿ ಬ್ಲಾಕ್ನಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಅರ್ಚಕ ಚಿತ್ರಕುಮಾರ್ ಭಟ್ ಪೌರೋಹಿತ್ವದಲ್ಲಿ ವಿಶೇಷ ಪೂಜೆ ನಡೆಯಿತು.