ಮಡಿಕೇರಿ, ಏ. ೨೩: ರಾಷ್ಟಿçÃಯ ಹೆದ್ದಾರಿ ೨೭೫ರ ಮಡಿಕೇರಿ - ಸಂಪಾಜೆ ನಡುವೆ ಜೋಡುಪಾಲ ಜಂಕ್ಷನ್ ಬಳಿ ಇರುವ ಸರ್ವೀಸ್ ಸ್ಟೇಷನ್ ಎದುರು ಭಾಗದ ರಸ್ತೆಯು ಕಳೆದ ಸಾಲಿನಲ್ಲಿ ಸುರಿದ ಭಾರೀ ಮಳೆಯಿಂದ ಕುಸಿದಿದ್ದು, ರಸ್ತೆಗೆ ಮರಳು ಚೀಲದಿಂದ ತಡೆಗೋಡೆ ನಿರ್ಮಿಸಿ, ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು.

ಆದರೆ ಇತ್ತೀಚೆಗೆ ಸುರಿದ ಮಳೆಯಿಂದ ರಸ್ತೆಗೆ ತಡೆಗೋಡೆಯಂತೆ ಅಳವಡಿಸಿದ್ದ ಮರಳು ಚೀಲಗಳು ಜರುಗಿ ಹೋಗಿದ್ದು, ರಸ್ತೆಯ ಅರ್ಧ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿರು ವುದರಿಂದ ಕರ್ನಾಟಕ ಪೊಲೀಸ್ ಕಾಯ್ದೆ ೧೯೬೩ರ ವಿಧಿ ೩೧, ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಆಕ್ಟ್ ೨೦೦೫ರ ಕಲಂ ೩೩, ಮೋಟಾರು ವಾಹನ ಕಾಯ್ದೆ ೧೯೮೮ರ ಕಲಂ ೧೧೫ ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮ ೧೯೮೯ರ (ತಿದ್ದುಪಡಿ ನಿಯಮಾವಳಿ ೧೯೯೦) ನಿಯಮ ೨೨೧ಎ(೫),

(ಮೊದಲ ಪುಟದಿಂದ) ದಂಡಪ್ರಕ್ರಿಯಾ ಸಂಹಿತೆ ೧೯೭೩ರ ಕಲಂ ೧೪೪ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾ ದಂಡಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಚಾರುಲತಾ ಸೋಮಲ್ ಅವರು, ಸ್ಥಳೀಯರ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ರಾಷ್ಟಿçÃಯ ಹೆದ್ದಾರಿ ೨೭೫ರ ಮಡಿಕೇರಿ- ಸಂಪಾಜೆ ರಸ್ತೆಯಲ್ಲಿ ಪ್ರಯಾಣಿಕರ ವಾಹನಗಳನ್ನು ಹೊರತು ಪಡಿಸಿ ಉಳಿದಂತೆ ಸರಕು ಸಾಗಾಣಿಕೆಯ ಭಾರೀ ವಾಹನಗಳಾದ ಷಿಪ್ ಕಾರ್ಗೋ ಕಂಟೈರ‍್ಸ್, ಮಲ್ಟಿ ಎಕ್ಸೆಲ್ ಟ್ರಕ್‌ಗಳು ಮುಂತಾದ ವಾಹನಗಳ ಸಂಚಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ನಿಷೇಧಿಸಿ ಆದೇಶಿಸಿದ್ದಾರೆ. ರಸ್ತೆಯಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ತಾ. ೨೩ರ ‘ಶಕ್ತಿ’ಯಲ್ಲಿ ಬೆಳಕು ಚೆಲ್ಲಲಾಗಿತ್ತು.