ಸೋಮವಾರಪೇಟೆ, ಏ. ೨೩: ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ದೇವರಕಾಡಿನ ೨೦ ಸೆಂಟ್ ಜಾಗ ಹೊತ್ತಿ ಉರಿದ ಪ್ರಕರಣಕ್ಕೆ ಸಂಬAಧಿಸಿದAತೆ, ಘಟನೆಗೆ ಕಾರಣರಾದ ವ್ಯಕ್ತಿಯಿಂದ ಲಂಚದ ಹಣಕ್ಕೆ ಬೇಡಿಕೆ ಇಟ್ಟ ಅರಣ್ಯ ಇಲಾಖೆಯ ಈರ್ವರು ಅಧಿಕಾರಿಗಳನ್ನು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಮಡಿಕೇರಿಯ ಗಾಳಿಬೀಡು ಬೀಟ್ನ ಗಾರ್ಡ್ ಅನಿಲ್ ಹಾಗೂ ಡಿ.ಆರ್.ಎಫ್.ಓ. ರಮೇಶ್ ಅವರುಗಳೇ ಬಂದಿತರು.
ಕಳೆದ ೨೦೧೮ರಂದು ಸಂಭವಿಸಿದ ಜಲಪ್ರಳಯದಿಂದಾಗಿ ಗಾಳಿಬೀಡಿನ ನಿಡುವಟ್ಟು ಗ್ರಾಮ ನಿವಾಸಿ ಕೆ.ಕೆ. ದುರ್ಯೋದನ (ಅರುಣ್) ಎಂಬವರಿಗೆ ಸೇರಿದ ಗದ್ದೆಯಲ್ಲಿ ಮಣ್ಣು ಹಾಗೂ ಮರದ ತುಂಡುಗಳು ಶೇಖರಣೆಯಾಗಿದ್ದವು.
ಇಂತಹ ಮರದ ಕೊಂಬೆಗಳನ್ನು ಒಂದೆಡೆ ಶೇಖರಣೆ ಮಾಡಿ ಬೆಂಕಿ ಹಾಕಿದ ಪರಿಣಾಮ, ಪಕ್ಕದಲ್ಲೇ ಇದ್ದ ಭದ್ರಕಾಳಿ ದೇವಸ್ಥಾನಕ್ಕೆ ಸೇರಿದ ದೇವರಬನದಲ್ಲಿ ಅರ್ಚಕರಿಗೆ ಮನೆ ನಿರ್ಮಿಸಲೆಂದು
(ಮೊದಲ ಪುಟದಿಂದ) ಕಾಡು ಕಡಿದು ಸಂಗ್ರಹಿಸಿಟ್ಟಿದ್ದ ಗುಡ್ಡೆಗೆ ಬೆಂಕಿ ತಗುಲಿ ೨೦ ಸೆಂಟ್ನಷ್ಟು ಜಾಗ ಸುಟ್ಟುಹೋಗಿತ್ತು.
ಘಟನೆ ನಡೆದ ಸ್ಥಳಕ್ಕೆ ತಾ. ೮.೪.೨೦೨೧ ರಂದು ಅರಣ್ಯ ಇಲಾಖೆಯ ಅಧಿಕಾರಿಗಳಾದ ಅನಿಲ್ ಮತ್ತು ರಮೇಶ್ ಅವರುಗಳು ತೆರಳಿ ಸ್ಥಳ ಮಹಜರು ನಡೆಸಿದ್ದು, ಸದರಿ ಜಾಗದಲ್ಲಿ ಮರ ಗಿಡಗಳನ್ನು ನೆಡಬೇಕು. ಸರ್ಕಾರ ದಂಡ ಹಾಕಿದರೆ ಹಣ ಕಟ್ಟಬೇಕು. ಇದರೊಂದಿಗೆ ದೇವರಕಾಡು ಸುಟ್ಟ ಬಗ್ಗೆ ಕೇಸ್ ಮಾಡಿದರೆ ೫೦ ಸಾವಿರ ದಂಡ ಆಗುತ್ತದೆ. ನಮ್ಮ ಮಟ್ಟದಲ್ಲಿಯೇ ಮುಗಿಸುತ್ತೇವೆ ಎಂದು ತಿಳಿಸಿ ೨೫ ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಅದರಂತೆ ತಾ. ೧೫.೪.೨೦೨೧ರಂದು ದುರ್ಯೋದನ ಅವರಿಂದ ೨೫೦೦ ಹಣವನ್ನು ಮುಂಗಡವಾಗಿ ಪಡೆದು, ಇನ್ನೂ ೫ ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅರಣ್ಯಾಧಿಕಾರಿಗಳ ವಿರುದ್ಧ ತಾ. ೨೨ ರಂದು ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದುರ್ಯೋದನ ಅವರು ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು ಇಂದು ಕಾರ್ಯಾಚರಣೆ ನಡೆಸಿದ್ದು, ಮಡಿಕೇರಿ ನಗರದ ಐಟಿಐ ಜಂಕ್ಷನ್ ಬಳಿಯಿರುವ ಕಾನ್ವೆಂಟ್ಗೆ ತೆರಳುವ ಕಾಲುರಸ್ತೆಯಲ್ಲಿ ದುರ್ಯೋದನ ಅವರಿಂದ ಫಾರೆಸ್ಟ್ ಗಾರ್ಡ್ ಅನಿಲ್ ಅವರು ರೂ. ೫,೫೦೦ ಲಂಚದ ಹಣ ಪಡೆಯುವ ಸಂದರ್ಭ ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಮತ್ತೋರ್ವ ಆರೋಪಿ, ಡಿಆರ್ಎಫ್ಓ ರಮೇಶ್ ಅವರನ್ನೂ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆದಿದೆ.
ಭ್ರಷ್ಟಾಚಾರ ನಿಗ್ರಹ ದಳದ ದಕ್ಷಿಣ ವಲಯ ಪೊಲೀಸ್ ಅಧೀಕ್ಷಕ ಅರುಣಾಂಗ್ಯು ಗಿರಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜಿಲ್ಲಾ ಎಸಿಬಿ ಪ್ರಭಾರ ಪೊಲೀಸ್ ಉಪಾಧೀಕ್ಷಕರಾದ ಸದಾನಂದ ಎ. ತಿಪ್ಪಣ್ಣವರಮ ನಿರೀಕ್ಷಕರುಗಳಾದ ಎನ್.ಪಿ. ಹರೀಶ್, ಪಿ.ಜೆ. ಮಧುಕರ್ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.