ಸೋಮವಾರಪೇಟೆ, ಏ. ೨೩: ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉಚಿತ ಮಧುಮೇಹ ತಪಾಸಣೆ ಮತ್ತು ರಕ್ತ ಗುಂಪು ಪರೀಕ್ಷಾ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಸತೀಶ್ ಉದ್ಘಾಟಿಸಿದರು. ನಂತರ ಮಾತನಾಡಿ, ೪೦ರ ಮಯೋಮಾನದ ನಂತರ ದವರು ವರ್ಷಕ್ಕೆ ಒಮ್ಮೆಯಾದÀರೂ ತಮ್ಮ ರಕ್ತದ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇದರಿಂದಾಗಿ ರಕ್ತದಲ್ಲಿ ಮಧುಮೇಹ ಸೇರಿದಂತೆ ಯಾವುದಾದರೂ ಕಾಯಿಲೆಗಳಿದ್ದರೆ ತಿಳಿದು ಸೂಕ್ತ ಚಿಕಿತ್ಸೆ ಪಡೆಯ ಬಹುದಾಗಿದೆ ಎಂದರು.
ಅಧ್ಯಕ್ಷತೆಯನ್ನು ಜೇಸಿ ಸಂಸ್ಥೆಯ ಅಧ್ಯಕ್ಷೆ ಮಾಯಾ ಗಿರೀಶ್ ವಹಿಸಿದ್ದರು. ಉಪಾಧ್ಯಕ್ಷ ಪುಷ್ಪಕ್ ಉಪಸ್ಥಿತರಿದ್ದರು.