ಮಡಿಕೇರಿ, ಏ. ೨೩: ದಕ್ಷಿಣ ಕೊಡಗಿನ ಹಲವೆಡೆಗಳಲ್ಲಿ ತಾ. ೨೨ ರ ನಡುರಾತ್ರಿ ಗುಡುಗು-ಮಿಂಚಿನ ಸಹಿತವಾಗಿ ಭಾರೀ ಮಳೆಯಾಗಿರುವ ಕುರಿತು ವರದಿಯಾಗಿದೆ.

ಶ್ರೀಮಂಗಲ, ಕುಟ್ಟ, ಬಿರುನಾಣಿ, ಟಿ. ಶೆಟ್ಟಿಗೇರಿ, ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ರಾತ್ರಿ ೨ ರಿಂದ ೩ ಗಂಟೆಯ ವೇಳೆಯಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ಹಲವೆಡೆ ಸುಮಾರು ೫೦ ಸೆಂಟ್‌ನಿAದ ೧ ಇಂಚಿನಷ್ಟು ಮಳೆಯಾಗಿದ್ದರೆ, ಇನ್ನು ಕೆಲವು ಗ್ರಾಮಗಳಲ್ಲಿ ೨ ರಿಂದ ೩ ಇಂಚಿನಷ್ಟು ಮಳೆ ಕೇವಲ ಒಂದು ತಾಸಿನ ಅವಧಿಯಲ್ಲಿ ಸುರಿದಿದೆ.

ಬಿರುನಾಣಿ, ಬಾಡಗರಕೇರಿ, ಪೊರಾಡು, ತೆರಾಲು, ಪರಕಟಗೇರಿ ವಿಭಾಗದಲ್ಲಿ ೨.೫೦ ರಿಂದ ೩ ಇಂಚು ಮಳೆಬಿದ್ದಿದೆ. ಟಿ. ಶೆಟ್ಟಿಗೇರಿ ೨.೨೦, ಹೈಸೊಡ್ಲೂರು ೨.೫೦, ಕುಮಟೂರು ೧.೩೦, ಕುಟ್ಟ ೦.೬೦, ನಾಲ್ಕೇರಿ ೦.೫೦, ಶ್ರೀಮಂಗಲ ೦.೮೫, ಕಾಯಮಾನಿ ೦.೫೫, ತಾವಳಗೇರಿ ೨.೭೫, ಕಾಕೂರು ೧.೧೦, ಪೋಕಳತೋಡು ೨.೨೫ ಇಂಚು. ಈ ರೀತಿಯಾಗಿ ನಡುರಾತ್ರಿ ಭಾರೀ ಮಳೆಯಾಗಿರುವುದು ವಿಶೇಷವಾಗಿದೆ. ಮಳೆಯೊಂದಿಗೆ ಸಿಡಿಲು - ಮಿಂಚಿನ ಆರ್ಭಟವೂ ಭಯಹುಟ್ಟಿಸುವಂತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಶೀಟ್ ಹಾರಿ ಹಾನಿ

*ಗೋಣಿಕೊಪ್ಪಲು, ಏ. ೨೩: ಸಮೀಪದ ಈರಣ್ಣ ಕಾಲೋನಿಯ ನಿವಾಸಿ ಚಂದ್ರನಾಯಕ್ ಅವರ ಮನೆಯ ಹದಿನಾಲ್ಕು ಶೀಟ್ ಗಳು ಗಾಳಿಯ ರಭಸಕ್ಕೆ ಹಾರಿಹೋಗಿ ನಷ್ಟ ಉಂಟಾಗಿದೆ.

ಶುಕ್ರವಾರ ಬೆಳಗ್ಗೆ ೨ ಗಂಟೆಯಿAದ ೫.೪೦ರ ವರೆಗೆ ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಸುಮಾರು ೧.೫ ಇಂಚು ಮಳೆ ಸುರಿದಿದೆ. ಮಳೆಯೊಂದಿಗೆ ಗುಡುಗು, ಸಿಡಿಲು ಮತ್ತು ಗಾಳಿಯ ಆರ್ಭಟವೂ ಹೆಚ್ಚಾಗಿ ಬಹುತೇಕ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು.

ತಿತಿಮತಿ, ಪೊನ್ನಂಪೇಟೆ,

ಪಾಲಿಬೆಟ್ಟ, ಹಾತೂರು, ಬಿಟ್ಟಂಗಾಲ, ಸೇರಿದಂತೆ ಹಲವು ಭಾಗಗಳಲ್ಲೂ ಉತ್ತಮ ಮಳೆಯಾಗಿದೆ. ತಿತಿಮತಿ ಭಾಗದಲ್ಲಿ ಮಳೆಯಿಂದ ಕಳೆದ ಎರಡು ದಿನಗಳಿಂದ ವಿದ್ಯುತ್ ಹಾಗೂ ಬಿ.ಎಸ್.ಎನ್.ಎಲ್ ನೆಟ್‌ವರ್ಕ್ ಸಂಪರ್ಕ ಕಡಿತಗೊಂಡಿದೆ.

ಸಿಡಿಲಿನಿAದ ಹಾನಿ

ಗೋಣಿಕೊಪ್ಪ ವರದಿ: ಶುಕ್ರವಾರ ಮುಂಜಾನೆ ಸಿಡಿಲು, ಮಳೆಯಿಂದ ಜನತೆ ಬೆಚ್ಚಿ ಬಿದ್ದಿದೆ. ಕುಟ್ಟಂದಿ ಗ್ರಾಮದ ಕೊಲ್ಲೀರ ಬೋಪಣ್ಣ ಅವರ ಕಾಫಿ ತೋಟದಲ್ಲಿ ಸಿಡಿಲಿಗೆ ಬೊಳ್ಳಂದಿ ಮರ ಸೀಳಿಕೊಂಡು ಬಂದಿದೆ. ಮರದ ಮೇಲಿನ ರೆಂಬೆಯಿAದ ಬುಡದವರೆಗೂ ಒಂದು ಭಾಗ ಸೀಳಿದೆ. ಇದರಿಂದ ಸುತ್ತಲಿನ ಕಾಫಿಗಿಡಕ್ಕೂ ಹಾನಿಯಾಗಿದೆ.

ಉಳಿದಂತೆ ಗೋಣಿಕೊಪ್ಪ, ಪೊನ್ನಂಪೇಟೆ, ಮಾಯಮುಡಿ, ಬಿ. ಶೆಟ್ಟಿಗೇರಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಗುಡುಗು ಮಿಂಚಿಗೆ ಜನತೆ ಬೆಚ್ಚಿದರು.