ಗುಡ್ಡೆಹೊಸೂರು, ಏ. ೨೨: ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಮಾಸ್ಕ್ ಧರಿಸದಿರುವ ನಾಗರಿಕರಿಗೆ ಸ್ಥಳದಲ್ಲಿಯೇ ದಂಡ ಹಾಕಲಾಯಿತು. ಕೆಲವು ಮಂದಿ ಮೂಗು, ಬಾಯಿ ಮುಚ್ಚದೆ ಗಡ್ಡಕ್ಕೆ ಮಾಸ್ಕ್ ಅಳವಡಿಸುತ್ತಾರೆ; ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ವ್ಯಕ್ತಿಗಳನ್ನು ಪತ್ತೆಹಚ್ಚಿ ದಂಡ ಹಾಕಲಾಯಿತು.
ಪಿ.ಡಿ.ಓ. ಶ್ಯಾಂ ಮತ್ತು ಈ ವಿಭಾಗದ ಕಂದಾಯ ಇಲಾಖಾಧಿಕಾರಿ ಗೌತಮ್, ಗ್ರಾ.ಪಂ. ಸಿಬ್ಬಂದಿ ವಿಜಯ್ ಭಾಗವಹಿಸಿದ್ದರು.