ಮಡಿಕೇರಿ, ಏ. ೨೨: ಕೋವಿಡ್ ನಿಯಮ ಉಲ್ಲಂಘಿಸಿ ವಹಿವಾಟು ನಡೆಸುತ್ತಿದ್ದ ಮಡಿಕೇರಿ ನಗರದ ಎರಡು ಹೊಟೇಲ್‌ಗಳಿಗೆ ದಂಡ ವಿಧಿಸಿ ಬಂದ್ ಮಾಡಿರುವ ಪ್ರಕರಣ ನಡೆದಿದೆ.
ಇಲ್ಲಿನ ಜಿ.ಟಿ. ರಸ್ತೆಯಲ್ಲಿರುವ ಹೊಟೇಲ್ ಹೈವೇ ಹಾಗೂ ಸುಜಾತ ಕ್ಯಾಂಟೀನ್‌ಗಳಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಹೊಟೇಲ್ ಒಳಗಡೆ ಗ್ರಾಹಕರಿಗೆ ತಿಂಡಿ-ತಿನಿಸುಗಳನ್ನು ಒದಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ ನಗರ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಎರಡು ಹೊಟೇಲ್‌ಗಳಿಗೆ ತಲಾ ರೂ. ೫೦೦೦ದಂತೆ ದಂಡ ವಿಧಿಸಿ, ಬೀಗ ಜಡಿದು ಬಂದ್ ಮಾಡಿ ಕ್ರಮ ಕೈಗೊಂಡಿದ್ದಾರೆ.