ಚೆಟ್ಟಳ್ಳಿ, ಏ. ೨೧: ಚೆಟ್ಟಳ್ಳಿಯ ಬೇಟೆಗಾರ ಅಯ್ಯಪ್ಪನ ನೆಲೆಯಲ್ಲಿ ವಾರ್ಷಿಕ ಪೂಜೆಯು ಶ್ರದ್ಧಾಭಕ್ತಿಯಿಂದ ನೆರವೇರಿತು. ಊರಿನವರು ದೇವನೆಲೆಯಲ್ಲಿ ಚಪ್ಪರಹಾಕಿ ಬಿಲ್ಲನ್ನು ತಯಾರಿಸಿದರು. ಅರ್ಚಕರು ಬೇಟೆಗಾರ ಅಯ್ಯಪ್ಪನಿಗೆ ಹೂ ಹಣ್ಣು, ಹಾಲು ಪಂಚಾಮೃತ ಹಾಗೂ ಪಂಚಕಜ್ಜಾಯವನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಬೇಟೆಗಾರ ಅಯ್ಯಪ್ಪನ ಸೇವಕರಿಗೆ ಊರಿನವರು ಬಲಿಪೂಜೆಯನ್ನು ಸಮರ್ಪಿಸಿದರು.