ಶನಿವಾರಸಂತೆಯಲ್ಲಿ ಗುಡುಗು-ಸಿಡಿಲಿನ ಮಳೆ

ಶನಿವಾರಸಂತೆ, ಏ. ೨೧: ಪಟ್ಟಣ ಹಾಗೂ ಹೋಬಳಿ ಯಾದ್ಯಂತ ಬುಧವಾರ ಮಧ್ಯಾಹ್ನ ೩ ಗಂಟೆಯಿAದ ೪ ಗಂಟೆವರೆಗೆ ಗುಡುಗು-ಸಿಡಿಲಿನ ಆರ್ಭಟ ಹಾಗೂ ಬಿರುಗಾಳಿ ಸಹಿತ ಮಳೆ ಸುರಿಯಿತು.

ಸಮೀಪದ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೂಜಗೇರಿ, ಕಾಜೂರು, ಮಾದ್ರೆ, ಬಿಳಾಹ, ದುಂಡಳ್ಳಿ, ದೊಡ್ಡಕೊಳತ್ತೂರು, ಚಿಕ್ಕಕೊಳ ತ್ತೂರು ಗ್ರಾಮಗಳಿಗೆ ಒಂದು ಇಂಚು ಮಳೆಯಾಗಿದೆ. ಈ ಭಾಗದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಚಿತ್ರವೆಂದರೆ ಮಳೆಯ ಪ್ರಮಾಣ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಿದೆ. ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಬಿರುಸಾದ ಮಳೆಯಾಗಿದ್ದರೆ ೧ನೇ ವಿಭಾಗದಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿ ಬಿಸಿಲಿನ ವಾತಾವರಣ ವಿತ್ತು.