ಕಣಿವೆ, ಏ. ೨೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಬಳಿಯ ಶಿರವೊಳಲು ಎಂಬಲ್ಲಿ ಕೂಲಿ ಕಾರ್ಮಿಕ ಮಹಿಳೆ ಗೌರಮ್ಮ ಎಂಬವರು ಸಾಕಿದ್ದ ನಾಟಿ ತಳಿಯ ಕೋಳಿಗಳಿಗೆ ಕಿಡಿಗೇಡಿಗಳು ವಿಷವುಣಿಸಿ ಸಾಯಿಸಿದ್ದು ನಷ್ಟ ಸಂಭವಿಸಿದೆ.
ಮಕ್ಕಳAತೆ ಮುದ್ದು ಮುದ್ದಾಗಿ ಸಾಕಿದ್ದ ಕೋಳಿಗಳನ್ನು ವಿಷವುಣಿಸಿ ಸಾಯಿಸಿದ ಕಿಡಿಗೇಡಿಗಳಿಗೆ ಸರಿಯಾದ ಶಿಕ್ಷೆಯಾಗಬೇಕೆಂದು ಆಕ್ರೋಶ ಹೊರಹಾಕಿದ್ದಾರೆ.
ಮನೆಯಂಗಳದಿAದ ಅಕ್ಕಪಕ್ಕದ ಮನೆಯಂಗಳಗಳಿಗೆ ಧಾವಿಸಿ ಅಲ್ಲಿ ಇಲ್ಲಿ ನೆಲವನ್ನು ಕುಕ್ಕಿ ಮಲ-ಮೂತ್ರ ವಿಸರ್ಜನೆ ಮಾಡಿ ಗಲೀಜು ಮಾಡುತ್ತವೆ ಎಂಬ ಕಾರಣಕ್ಕೆ ಇಂತಹ ದುಷ್ಕೃತ್ಯ ಎಸಗಿರುವ ಬಗ್ಗೆ ನೆರೆ ಹೊರೆಯ ಮಂದಿಯನ್ನು ಶಪಿಸಿರುವ ಈ ಗೌರಮ್ಮ; ಕೂಡಲೇ ಸಂಬAಧಪಟ್ಟ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸೂಕ್ತ ಪರಿಹಾರ ಕೊಡಬೇಕೆಂದು ಆಗ್ರಹಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ನಾಟಿ ತಳಿಯ ಕೋಳಿ ಹಾಗೂ ಕೋಳಿ ಮೊಟ್ಟೆಗಳಿಗೆ ಭಾರೀ ಬೇಡಿಕೆ ಇರುವುದನ್ನು ಇಲ್ಲಿ ಸ್ಮರಿಸಬಹುದು.