ವೀರಾಜಪೇಟೆ, ಏ. ೨೧: ರಾಜ್ಯದ ವಿವಿಧೆಡೆ ದ್ವಿಚಕ್ರ ವಾಹನಗಳ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ ೫ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮAಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದ ಸಿ.ವಿ. ಉಮೇಶ, ಕೆ.ಆರ್.ಪೇಟೆ ತಾಲೂಕಿನ ಅಂಚನಳ್ಳಿ ಗ್ರಾಮದ ಎ.ಸಿ. ಹರೀಶ ಹಾಗೂ ಕೆ.ಆರ್.ಪೇಟೆ ತಾಲೂಕಿನ ಅಂಚನಳ್ಳಿ ಎ.ವಿ. ಮನು ಕುಮಾರ್ ಎಂಬ ಮೂವರು ಬಂಧಿತ ಆರೋಪಿಗಳು. ತಾ. ೧೮ ರಂದು ಪಟ್ಟಣದ ಕೆ.ಎಂ. ಇಬ್ರಾಹಿಂ ಎಂಬವರಿಗೆ ಸೇರಿದ ದ್ವಿಚಕ್ರ ವಾಹನ ಕಳವಾದ ಕುರಿತು ಇಲ್ಲಿನ ನಗರ ಪೊಲೀಸರು ಉಳಿದ ಆರೋಪಿಗಳನ್ನು ರಾಜ್ಯ ಸರಕಾರಿ ಬಸ್ ನಿಲ್ದಾಣದಲ್ಲಿ ಬಂಧಿಸಿದರು. ಈ ಸಂದರ್ಭ ಆರೋಪಿಗಳಿಂದ ಬೆಂಗಳೂರಿನ ಬಿಡದಿ, ಮೈಸೂರು ಹಾಗೂ ಮಂಡ್ಯ ಮುಂತಾದೆಡೆಗಳಿAದ ಕಳ್ಳತನ ಮಾಡಿದ ಸುಮಾರು ೩.೫೦ ಲಕ್ಷ ರೂ ಮೌಲ್ಯದ ೫ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್ಪಿ ಜಯ ಕುಮಾರ್ ನಿರ್ದೇಶನದಲ್ಲಿ, ಸಿಪಿಐ ಬಿ.ಎಸ್.ಶ್ರೀಧರ್ ಮಾರ್ಗದರ್ಶನದಲ್ಲಿ, ನಗರ ಠಾಣೆಯ ಎಸ್‌ಐ ಜಗದೀಶ್ ಧೂಳ ಶೆಟ್ಟಿ, ಅಪರಾಧ ವಿಭಾಗದ ಎಸ್‌ಐ ಬೋಜಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮುಸ್ತಫ, ಮುನೀರ್, ಮಧು, ಲೋಕೇಶ್, ಪ್ರದೀಪ್, ಚಂದ್ರಶೇಖರ್, ರಾಮಪ್ಪ, ತೀರ್ಥ ಕುಮಾರ್, ಪೂವಯ್ಯ, ಸಂದೀಪ್, ರಾಜೇಶ್ ಹಾಗೂ ಗಿರೀಶ್ ಭಾಗವಹಿಸಿದ್ದರು.