ಮಡಿಕೇರಿ, ಏ. ೨೧: ಮಡಿಕೇರಿಯ ಅಂಚೆ ಕಚೇರಿ ಮುಂಭಾಗ ತಯಾರಿಸಿ ಇರಿಸಿರುವ ಅಂಗಡಿ ಮಳಿಗೆಗೆೆ ನಗರ ಸಭೆಯಿಂದ ಯಾವದೇ ಅನುಮತಿ ನೀಡಿಲ್ಲ ಎಂದು ನಗರಸಭಾ ಆಯುಕ್ತ ರಾಮದಾಸ್ ಪ್ರತಿಕ್ರಿಯಿಸಿದ್ದಾರೆ. ಮಂಗಳವಾರದ ‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ನಗರದಲ್ಲಿ ದಿಢೀರ್ ತಲೆ ಎತ್ತಿದ ಮಳಿಗೆ’ ವರದಿ ಬಗ್ಗೆ ಅವರು ಸಮಜಾಯಿಷಿಕೆಯಿತ್ತರು. ಮಳಿಗೆಯನ್ನು ಅಲ್ಲಿಂದ ತೆಗೆಯುವಂತೆ ಸಂಬAಧಿತ ವ್ಯಕ್ತಿಗೆ ಸೂಚಿಸಲಾಗಿದೆ. ತೆಗೆಯದಿದ್ದರೆ ನಾವೇ ತೆಗೆಸುತ್ತೇವೆ ಎಂದು ಆಯುಕ್ತರು ಖಚಿತಪಡಿಸಿದ್ದಾರೆ.