*ವೀರಾಜಪೇಟೆ, ಏ. ೨೦: ತಾ. ೧೯ ರಂದು ತೀವ್ರ ಎದೆನೋವಿನಿಂದ ವಿಧಿವಶರಾದ ವೀರಾಜಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹರ್ಷವರ್ಧನ್ ಅವರಿಗೆ ಪಟ್ಟಣ ಪಂಚಾಯಿತಿ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಪುರಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಹರ್ಷವಧÀðನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಿಸಿ ಆತ್ಮಕ್ಕೆ ಶಾಂತಿ ಕೋರಲಾಯಿತು.

ಪ.ಪಂ ಸದಸ್ಯ, ಮೃತರ ಬಾಲ್ಯದ ಗೆಳೆಯ ರಾಜೇಶ್ ಪದ್ಮನಾಭ ಮಾತನಾಡಿ, ತಮ್ಮ ೩೫ ವರ್ಷಗಳ ಸ್ನೇಹ ನೆನೆದು ಕಣ್ಣೀರಿಟ್ಟರು. ನಾವಿಬ್ಬರೂ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದೆವು, ರಾಜಕೀಯಕ್ಕೂ ಜೊತೆಗೆೆ ಬಂದೆವು. ನಮ್ಮಿಬ್ಬರ ಪಕ್ಷಗಳು ಬೇರೆಯಿದ್ದರೂ ನಮ್ಮ ಸ್ನೇಹಕ್ಕೆ ಅದು ತಡೆಯಾಗಲಿಲ್ಲ. ನಾನು ಒಳ್ಳೆಯ ಗೆಳೆಯನನ್ನು ಕಳೆದುಕೊಂಡೆ ಎಂದು ಭಾವುಕರಾದರು.

ಸದಸ್ಯ ಪಟ್ಟಡ ರಂಜಿ ಪೂಣಚ್ಚ ಮಾತನಾಡಿ, ಉಪಾಧ್ಯಕ್ಷರಾದ ಬಳಿಕ ವೀರಾಜಪೇಟೆ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಸುವ ಹಲವು ಕನಸುಗಳನ್ನು ಅವರು ಕಂಡಿದ್ದರು ಎಂದರು.

ಹಿರಿಯ ಅಭಿಯಂತರ ಹೇಮ್ ಕುಮಾರ್ ಅವರು ಹರ್ಷವರ್ಧನ್ ವೀರಾಜಪೇಟೆ ನಗರದ ಬಗ್ಗೆ ನಗರದ ಸ್ವಚ್ಛತೆಯ ಬಗ್ಗೆ ಹಲವು ಕನಸುಗಳನ್ನು ಕಂಡಿದ್ದರು ಆ ಕನಸುಗಳನ್ನು ನಿಜವಾಗಿಸುವ ನಿಟ್ಟಿನಲ್ಲಿ ಕೆಲಸಮಾಡೋಣ ಎಂದರು. ಸದಸ್ಯ ಮತೀನ್ ಎಸ್.ಹೆಚ್. ಮಾತನಾಡಿದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು, ಸಿಬ್ಬಂದಿಗಳು ಹಾಜರಿದ್ದರು.